ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್! ಲೀ.ಗೆ 5 ರೂ. ಹೆಚ್ಚಳ

ಹೊಸಪೇಟೆ: ಹಾಲು ಉತ್ಪಾದಕರಿಗೆ ಗುಡ್ನ್ಯೂಸ್ ! ನೂತನ ವರ್ಷದಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 5 ರೂ. ಹೆಚ್ಚಳವಾಗಲಿದೆ.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮೊರಿಗೇರಿ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘವನ್ನು ಉದ್ಘಾಟಿಸಿದ ನಂತರ ಕೆಎಂಎಫ್ ಅಧ್ಯಕ್ಷ ಎಸ್ ಭೀಮನಾಯ್ಕ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಹಾಲು ಉತ್ಪಾದಕ ರೈತರು ತೀವ್ರ ಸಂಕಷ್ಟದಲ್ಲಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿದೆ. ಹೊಸ ವರ್ಷದಲ್ಲಿ ಹಾಲು ಉತ್ಪಾದಕರಿಗೆ ಕನಿಷ್ಠ 5 ರೂ. ಹಾಲಿನ ದರ ಹೆಚ್ಚಿಸಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಹಾಲು ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು, ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ನಂದಿನಿ ಹಾಲು ಉತ್ಪನ್ನಗಳಲ್ಲಿ ರಾಸಾಯನಿಕ ಬಳಕೆ ಮಾಡುವುದಿಲ್ಲ. ದಿಲ್ಲಿಯಲ್ಲಿ ಹಲವರು ನಂದಿನಿ ಹಾಲು ಖರೀದಿಸಿ ರಸ್ತೆಗೆ ಚೆಲ್ಲುವ ಮೂಲಕ ಕೃತಕ ಅಭಾವ ಸೃಷ್ಠಿಸಿದ್ದರು. ಇದೀಗ ಸತತ 4 ದಿನ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿದ ಫಲವಾಗಿ ದಿಲ್ಲಿಯಲ್ಲಿ 15 ಸಾವಿರ ಲೀ.ನಂದಿನಿ ಹಾಲು ಮಾರಾಟವಾಗುತ್ತಿದೆ. ಹೊಸ ವರ್ಷದಿಂದ ರಾಜಸ್ಥಾನದ ಜೈಪುರ ಮತ್ತು ಗುಜರಾತ್ನಲ್ಲಿ ಸಂಕ್ರಾಂತಿಯಿಂದ ನಂದಿನಿ ಉತ್ಪನ್ನ ಮಾರಾಟವಾಗಲಿದೆ ಎಂದರು.

More articles

Latest article

Most read