ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಹೊಸ ವರ್ಷ ಸಂತಸವನ್ನೇನೂ ತಂದ ಹಾಗಿಲ್ಲ. ಹೊಸ ವರ್ಷದ ಮೊದಲ ಎರಡು ದಿನಗಳಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಜನವರಿ 2, 2025 ಕ್ಕೆ ದೇಶೀಯ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 7,180 ರೂ. ಇದ್ದು, ನಿನ್ನೆಯ ಬೆಲೆಗಿಂತ ಇಂದು ರೂ. 30 ಏರಿಕೆ ಆಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ 71,800 ರೂ ಗೆ ಏರಿಕೆ ಆಗಿದೆ. 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 33 ರೂ. ಏರಿಕೆ ಆಗಿದ್ದು, 7,833 ರೂ.ಗೆ ತಲುಪಿದೆ.
ಬೆಂಗಳೂರಿನಲ್ಲಿಯೂ ಚಿನ್ನದ ಬೆಲೆ ಪ್ರತಿ ಗ್ರಾಂಗೆ 30 ರೂ. ಏರಿಕೆ ಆಗಿದೆ. 1 ಗ್ರಾಂ ಚಿನ್ನದ ಬೆಲೆ 7,180 ರೂ. ತಲುಪಿದೆ. ಬೆಳ್ಳಿಯ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದು, 90.50 ರೂನಷ್ಟಿದೆ. ಇದೆ. ಕೆಜಿ ಬೆಳ್ಳಿಯ ಬೆಲೆ 90,500 ರೂಗೆ ಏರಿಕೆಯಾಗಿದೆ.
2024ರ ಡಿಸೆಂಬರ್ 1 ರಂದು 7,150 ರೂ ನಷ್ಟಿದ್ದ ಚಿನ್ನದ ಬೆಲೆ ಡಿಸೆಂಬರ್ 31 ಕ್ಕೆ 7,110 ರೂ ಗಳಷ್ಟಿತ್ತು. ಬಹುತೇಕ ಚಿನ್ನದ ಬೆಲೆ ತಟಸ್ಥವಾಗಿತ್ತು. ಡಿಸೆಂಬರ್ 20 ರಂದು 7,040ರೂ.ಗಳಿಗೆ ಇಳಿದಿತ್ತು. ಇದು ಡಿಸೆಂಬರ್ ನ ಕನಿಷ್ಠ ಬೆಲೆಯಾಗಿದ್ದರೆ ಅತಿ ಗರಿಷ್ಠ ಬೆಲೆ ಡಿಸೆಂಬರ್ 11 ರಂದು 7,285 ರೂ ಗೆ ಏರಿಕೆಯಾಗಿತ್ತು. ಈ ಎಲ್ಲ ಬೆಲೆಗಳೂ ಜಿಎಸ್‌ಟಿ ಹೊರತುಪಡಿಸಿದ ಬೆಲೆಯಾಗಿವೆ. ಇದೀಗ ಹೊಸ ವರ್ಷದ ಆರಂಭದಲ್ಲೇ ಏರಿಕೆ ಕಾಣುತ್ತಿದೆ. ಅಂತರಾಷ್ಟ್ರೀಯ ಬೇಡಿಕೆ, ಚಿನ್ನದ ಮೇಲಿನ ಆಮದು ಸುಂಕ ಹಾಗೂ ಡಾಲರ್ ಎದುರು ಮೌಲ್ಯ ಆಧರಿಸಿ, ಆಯಾ ದಿನದ ಬಂಗಾರ ಹಾಗೂ ಬೆಳ್ಳಿಯ ಬೆಲೆಯು ನಿರ್ಧಾರವಾಗುತ್ತದೆ. ಈ ದರದಲ್ಲಿ ಜಿಎಸ್‌ಟಿ ಸೇರ್ಪಡೆ ಆಗಿಲ್ಲ. ಇಲ್ಲಿರುವ ಚಿನ್ನದ ದರ ಪಟ್ಟಿ ಜಿಎಸ್‌ಟಿ ಹೊರತುಪಡಿಸಿದ ಬೆಲೆಯಾಗಿದೆ.