ಪೊಲೀಸರು ಕರ್ತವ್ಯ ನಿರ್ವಹಿಸಿದ್ದರೆ ಗೋಧ್ರಾ ರೈಲು ದುರಂತ ತಡೆಯಬಹುದಿತ್ತು; ಗುಜರಾತ್‌ ಹೈಕೋರ್ಟ್‌

Most read

ಅಹಮದಾಬಾದ್‌: ಗೋಧ್ರಾ ಗಲಭೆ ಬಳಿಕ ನಿರ್ಲಕ್ಷ್ಯದ ಆರೋಪದ ಮೇಲೆ ಒಂಬತ್ತು ಮಂದಿ ರೈಲ್ವೆ ಪೊಲೀಸರನ್ನು ಕೆಲಸದಿಂದ ವಜಾ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಗುಜರಾತ್‌ ಹೈಕೋರ್ಟ್‌ ಎತ್ತಿ ಹಿಡಿದಿದೆ. ಈ ಒಂಬತ್ತು ಪೊಲೀಸರು ಚಲಿಸುವ ರೈಲಿನಲ್ಲಿ ಅಪರಾಧಗಳನ್ನು ತಡೆಯುವ ಉದ್ದೇಶದ ‘ಮೊಬೈಲ್‌ ಸ್ಕ್ವಾಡ್‌’ನ ಭಾಗವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಯಮೂರ್ತಿ ವೈಭವಿ ಡಿ. ನಾನಾವತಿ ಅವರು ಸುಮಾರು ೧೧೦ ಪುಟಗಳ ತೀರ್ಪಿನಲ್ಲಿ ಇವರ ಕರ್ತವ್ಯ ಲೋಪವನ್ನು ಎತ್ತಿ ಹಿಡಿದಿದ್ದಾರೆ.

2002ರ ಫೆಬ್ರುವರಿ 27ರಂದು ದಾಹೋದ್‌ ಮತ್ತು ಅಹಮದಾಬಾದ್‌ ಮಧ್ಯೆ ಸಂಚರಿಸುವ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಎಂದಿನಂತೆ ರೈಲು ತಡವಾಗಿ ಬರಲಿದೆ ಎಂದು ಭಾವಿಸಿ ಅವರು ಮತ್ತೊಂದು ರೈಲಿನಲ್ಲಿ ತೆರಳಿದ್ದರು. ಆದರೆ ಗೋಧ್ರಾ ರೈಲು ನಿಲ್ದಾಣದ ಸಮೀಪ ರೈಲಿನ ಒಂದು ಭೋಗಿಗೆ ಬೆಂಕಿ ಹಚ್ಚಲಾಯಿತು. ಮರುದಿನ ರಾಜ್ಯದಾದ್ಯಂತ ಕೋಮುಗಲಭೆ ನಡೆದಿತ್ತು.

ಇವರು ಸೂಕ್ತವಾಗಿ ಕರ್ತವ್ಯ ನಿರ್ವಹಿಸಿದ್ದರೆ ರೈಲಿನ ಭೋಗಿಯೊಂದಕ್ಕೆ ಬೆಂಕಿ ಹಚ್ಚುವುದನ್ನು ತಡೆಯಬಹುದಾಗಿತ್ತು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದ.
ಈ ಪೊಲೀಸರನ್ನು ಸಬರಮತಿ ರೈಲಿನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಇವರು ಶಾಂತಿ ಎಕ್ಸ್‌ ಪ್ರೆಸ್‌ ರೈಲಿನಲ್ಲಿ ತೆರಳಿದ್ದರು. ಹೀಗಾಗಿ ಸಬರಮತಿ ರೈಲಿನಲ್ಲಿ ಯಾವುದೇ ಅನಾಹುತ ತಡೆಯಲು ಅಥವಾ ನಿಯಂತ್ರಿಸಲು ಪೊಲೀಸರು ಇರಲೇ ಇಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಈ ಒಂಭತ್ತು ಮಂದಿ ಪೊಲೀಸರು ರಾಜ್‌ ಕೋಟ್‌ ಭೋಪಾಲ್‌ ಎಕ್ಸ್‌ ಪ್ರೆಸ್‌ ರೈಲಿನಲ್ಲಿ ಹೋಗಿ ಸಬರಮತಿ ರೈಲಿನಲ್ಲಿ ಹಿಂತಿರುಗಬೇಕಿತ್ತು. ಆದರೆ ಅವರು ಬೇರೊಂದು ರೈಲಿನಲ್ಲಿ ಮರಳಿದ್ದರು. ಈ ಒಂಭತ್ತು ಪೊಲೀಸರಲ್ಲಿ ಮೂವರು ರೈಫಲ್‌ , ಕಾರ್ಟ್ರಿಡ್ಜ್‌ ಹೊಂದಿದ್ದರು.

More articles

Latest article