ಪ್ಯಾರಿಸ್ ಒಲಿಂಪಿಕ್ಸ್ 50ಕೆಜಿ ವಿಭಾಗದ ಕುಸ್ತಿ ಫೈನಲ್ ನಲ್ಲಿ ವಿನೀಶ್ ಫೋಗಾಟ್ ರವರನ್ನು ಕೇವಲ 100ಗ್ರಾಂ ತೂಕ ಹೆಚ್ಚಳ ಆಗಿದೆ ಎಂಬ ಕಾರಣಕ್ಕೆ ಅನರ್ಹ ಮಾಡಿದ ಬೆನ್ನಲ್ಲೇ ವಿನೇಶ್ ಫೋಗಟ್ಗೆ ಯುಎಸ್ ಕುಸ್ತಿ ದಂತಕಥೆ ಜೋರ್ಡಾನ್ ಬರೋಸ್ ಬೆಳ್ಳಿ ಪದಕಕ್ಕಾಗಿ ಸಾರ್ವಜನಿಕವಾಗಿ ಬೇಡಿಕೆ ಇಟ್ಟಿದ್ದಾರೆ.
ಕುಸ್ತಿ ಫಯನಲ್ ನಲ್ಲಿ ಚಿನ್ನದ ಪದಕಕ್ಕೆ ಸಿದ್ದಕೊಂಡಿದ್ದ ವಿನೀಶ್ ಅವರನ್ನು ಅನರ್ಹತೆ ಮಾಡಿರುವುದು ಭಾರತವಲ್ಲದೇ ಜಾಗತಿಕ ಮಟ್ಟದಲ್ಲಿ ಕೋಲಾಹಲವನ್ನು ಉಂಟುಮಾಡಿದೆ. ಜೋರ್ಡಾನ್ ಬರೋಸ್ ಅವರು ತಮ್ಮ ಎಕ್ಸ್ ವೇದಿಕೆಯಲ್ಲಿ, ವರ್ಲ್ಡ್ ವ್ರೆಸ್ಲಿಂಗ್ (UWW) ನ ಪ್ರಸ್ತುತ ನಿಯಮಗಳನ್ನು ಟೀಕಿಸಿದ್ದು, ನಿಯಮಾವಳಿಗಳನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿದ್ದಾರೆ. ಭವಿಷ್ಯದಲ್ಲಿ ಈತರದ ಘಟನೆ ನಡೆಯದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಬರೋಸ್ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW) ನ ಪ್ರಸ್ತುತ ನಿಯಮಗಳನ್ನು ಬದಲಾವಣೆ ಕೋರಿದ್ದು, ಸತತವಾಗಿ ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಕುಸ್ತಿಪಟುಗಳಿಗೆ 1 ಕೆಜಿ ತೂಕಕ್ಕೆ ಅವಕಾಶ ಮಾಡಿಕೊಡಬೇಕು. 8:30 AM ನಿಂದ 10:30 AM ವರೆಗೆ ತೂಕದ ಸಮಯವನ್ನು ಮುಂದೂಡಬೇಕು ಎಂಬ ಹಲವು ಆಗ್ರಹಗಳ ಜೊತೆಗೆ ವಿನೀಶ್ ಫೋಗಾಟ್ ಅವರಿಗೆ ಬೆಳ್ಳಿ ಪದಕನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
“ಬಹುಶಃ ಈ ರೀತಿಯ ಘಟನೆ IOC (Indian Olympic Association) ಅನ್ನು ಎಚ್ಚರಗೊಳಿಸಬಹುದು. ಕುಸ್ತಿಗೆ ಆರಕ್ಕಿಂತ ಹೆಚ್ಚು ತೂಕದ ವರ್ಗಗಳ ಅಗತ್ಯವಿದೆ! ವಿಶ್ವ ದರ್ಜೆಯ ಎದುರಾಳಿಗಳ ವಿರುದ್ಧ ಮೂರು ಕಠಿಣ ಪಂದ್ಯಗಳನ್ನು ಎದುರಿಸಿದ ನಂತರ, ಯಾವುದೇ ಕ್ರೀಡಾಪಟು ಚಿನ್ನದ ಪದಕಕ್ಕಾಗಿ ಈ ರೀತಿ ರಾತ್ರಿಯನ್ನು ಕಳೆಯಬೇಕಾಗಿಲ್ಲ. ಇಂದಿನ ಫೈನಲ್ಗೆ ಅರ್ಹತೆ ಪಡೆಯಲು ಭಾರತದ ವಿನೇಶ್ ವಿಫಲರಾಗಿದ್ದಾರೆ. ಇದು ನಮಗೆಲ್ಲರಿಗೂ ಹತಾಶೆ ತಂದಿದೆ ಎಂದು ಬರೋಸ್ ಬರೆದಿದ್ದಾರೆ.
50 ಕೆಜಿ ವಿಭಾಗದ ಒಲಿಂಪಿಕ್ಸ್ ಫೈನಲಿಸ್ಟ್ ವಿನೇಶ್ ಫೋಗಟ್ ಇಂದು ಫೈನಲ್‌ನಲ್ಲಿ ಅಮೆರಿಕದ ಸಾರಾ ಹಿಲ್ಡೆಬ್ರಾಂಡ್ ವಿರುದ್ಧ ಸೆಣಸಾಡಬೇಕಿತ್ತು. ಕಳೆದ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಕ್ಯೂಬಾದ ಕುಸ್ತಿಪಟು ಹಿಲ್ಡೆಬ್ರಾಂಡ್ ಗುಜ್ಮನ್ ವಿರುದ್ಧ ವಿನೇಶ್ 5-0 ಅಂತರದಲ್ಲಿ ಗೆದ್ದಿದ್ದರು. ದುರದೃಷ್ಟವಶಾತ್ ವಿನೇಶ್ ಯಾವುದೇ ಪದಕವಿಲ್ಲದೆ ಪ್ಯಾರಿಸ್ ತೊರೆಯಲಿದ್ದಾರೆ ಎಂದು ಬೇಸರದಿಂದ ಟ್ವೀಟ್ ಮಾಡಿದ್ದಾರೆ.
ಜೋರ್ಡಾನ್ ಬರೋಸ್, ಆರು ಬಾರಿ ವಿಶ್ವ ಚಾಂಪಿಯನ್ಶಿಪ್ ಚಿನ್ನದ ಪದಕ ವಿಜೇತ ಮತ್ತು ಲಂಡನ್ 2012 ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತರು.
ಮಾಜಿ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಯಾವುದೇ ಉಲ್ಲಂಘನೆಯಿಲ್ಲದೆ ಫೈನಲ್ಗೆ ಹೋಗಲು ಯಶಸ್ವಿಯಾದ ಫೋಗಟ್ಗೆ ಕನಿಷ್ಠ ಬೆಳ್ಳಿ ಪದಕವನ್ನು ನೀಡಬೇಕು ಎಂದು ಸಲಹೆ ನೀಡಿದರು.