Ghibili Trend ಬಳಕೆ: ಗೋವಾ ಪೊಲೀಸರಿಂದ ಎಚ್ಚರಿಕೆಯ ಸಂದೇಶ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜೀಬ್ಲೀ ಆ್ಯನಿಮೇಟೆಡ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಸೆಲೆಬ್ರಿಟಿಗಳಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳ ಬಳಕೆದಾರರೂ ಜೀಬ್ಲೀ ಆ್ಯನಿಮೇಟೆಡ್ ಗೆ ಮರುಳಾಗಿದ್ದು ತಮ್ಮದೇ ಭಾವಚಿತ್ರಗಳ ಆ್ಯನಿಮೇಟೆಡ್ ಚಿತ್ರಗಳನ್ನು ನೋಡಿ ಆನಂದಿಸುತ್ತಿದ್ದಾರೆ ಮತ್ತು ಹಂಚಿಕೊಳ್ಳುತ್ತಿದ್ದಾರೆ.

ಈ ಮಧ್ಯೆ ಜೀಬ್ಲೀ ಬಳಕೆ ಕುರಿತು ಗೋವಾ ಪೊಲೀಸರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಗೋವಾ ಪೊಲೀಸರು, ನಿಮ್ಮ ಫೋಟೊಗಳನ್ನು ಜೀಬ್ಲೀ ಆ್ಯನಿಮೇಟೆಡ್ ಚಿತ್ರಗಳನ್ನಾಗಿ ಬದಲಾಯಿಸಿಕೊಳ್ಳುವ ಮುನ್ನ ಎಚ್ಚರ ವಹಿಸಿ. ಈ ಟ್ರೆಂಡ್ ಮನರಂಜನೆಯ ಭಾಗವಾಗಿರಬಹುದು. ಆದರೆ ನಿಮ್ಮ ವೈಯಕ್ತಿಕ ಚಿತ್ರಗಳನ್ನು ನಿರ್ದಿಷ್ಟ ಆ್ಯಪ್ಗಳಲ್ಲಿ ಅಪ್ಲೋಡ್ ಮಾಡಿದಾಗ ನಿಮ್ಮ ಫೋಟೊಗಳು ಸೈಬರ್ ವಂಚಕರು ದುರುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ನಿಮ್ಮ (ಸಾರ್ವಜನಿಕರು) ಫೋಟೊಗಳನ್ನು ಜೀಬ್ಲೀ ಆ್ಯನಿಮೇಟೆಡ್ ಚಿತ್ರಗಳನ್ನಾಗಿ ಬದಲಾಯಿಸಿಕೊಳ್ಳುವ ಮುನ್ನ ಯೋಚಿಸಿ. ಈ ಸಂಬಂಧ ಸೈಬರ್ ವಂಚನೆಯಾಗಿದ್ದಲ್ಲಿ ತಕ್ಷಣ 1930ಗೆ ಕರೆ ಮಾಡಿ ಮಾಹಿತಿ ನೀಡಿ ಎಂದೂ ಮಾಹಿತಿ ನೀಡಿದ್ದಾರೆ.

ಸ್ಟುಡಿಯೋ ಜೀಬ್ಲೀ ಎಂಬುವುದು ಓಪನ್ ಎಐ ಅಭಿವೃದ್ಧಿಪಡಿಸಿದ ಜನಪ್ರಿಯ ಎಐ ಚಾಟ್ ಬಾಟ್ ಚಾಟ್ ಜಿಪಿಟಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮತ್ತು ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಸೇರಿದಂತೆ ಅನಿಮೇಟೆಡ್ ಚಿತ್ರಗಳು ಟ್ರೆಂಡ್‌ ಆಗಿದ್ದು ಗಮನ ಸೆಳೆಯುತ್ತಿವೆ.

More articles

Latest article

Most read