ಬಿಹಾರದಲ್ಲಿ ಗಂಗಾನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ: ವರದಿ

ಪಟನಾ: ಬಿಹಾರದ ಅನೇಕ ಭಾಗಗಳಲ್ಲಿ ಗಂಗಾ ನದಿಯ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು ಬಿಹಾರದ 2024-25ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ. ಹಾನಿಕಾರಕ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಿರುವುದೇ ನೀರು ಮಲಿನವಾಗಲು ಕಾರಣ ಎಂದು ವರದಿ ಗುರುತಿಸಿದೆ. ಬಿಹಾರದ 34 ಭಾಗಗಳಲ್ಲಿ ಗಂಗಾ ನದಿಯ ಗುಣಮಟ್ಟವನ್ನು ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯು (ಬಿಎಸ್‌ಪಿಸಿಬಿ) ಪ್ರತಿ 15 ದಿನಗಳಿಗೊಮ್ಮೆ ಗಮನಿಸುತ್ತಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರ್ಥಿಕ ಸಮೀಕ್ಷೆಯ ವರದಿಯನ್ನು ಬಿಹಾರ ವಿಧಾನಸಭೆಯಲ್ಲಿ ಇತ್ತೀಚೆಗೆ ಮಂಡಿಸಲಾಗಿದೆ. ನದಿ ನೀರಿನ ಗುಣಮಟ್ಟವು, ಅದರಲ್ಲಿ ಹಾನಿಕಾರಕ ಬ್ಯಾಕ್ಟಿರಿಯಾಗಳ ಪ್ರಮಾಣ ಹೆಚ್ಚಿರುವುದನ್ನು ಸೂಚಿಸುತ್ತಿದೆ. ಗಂಗಾ ನದಿ ಮತ್ತು ಅದರ ಉಪನದಿಗಳ ದಂಡೆಯ ಮೇಲಿರುವ ನಗರಗಳ ಕೊಳಚೆ ನೀರು ಹಾಗೂ ಮನೆಗಳ ತ್ಯಾಜ್ಯ ನೀರನ್ನು ನದಿಗೆ ಬಿಡುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ ಎಂದೂ ವರದಿ ಹೇಳಿದೆ. ಆದರೆ, ಜಲಚರಗಳಿಗೆ, ಮೀನುಗಾರಿಕೆಗೆ ಮತ್ತು ನೀರಾವರಿಗೆ ಬಳಸಲು ಗಂಗಾ ಮತ್ತು ಅದರ ಉಪನದಿಗಳ ನೀರು ಯೋಗ್ಯವಾಗಿದೆ ಎಂದು ವರದಿ ಹೇಳಿದೆ.

ಗಂಗಾ ನದಿಯಲ್ಲಿ ಬ್ಯಾಕ್ಟಿರಿಯಾ ಪ್ರಮಾಣವು ಹೆಚ್ಚಿರುವುದು ಕಳವಳ ಮೂಡಿಸುವ ಸಂಗತಿ ಎಂದು ಬಿಎಸ್‌ಪಿಸಿಬಿ ಅಧ್ಯಕ್ಷ ಡಿ.ಕೆ. ಶುಕ್ಲಾ ಹೇಳಿದ್ದಾರೆ. ರಾಜ್ಯದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳು ಸರಿಯಾಗಿ ಕೆಲಸ ಮಾಡುವುದನ್ನು ಖಾತರಿಪಡಿಸಲು ಮಂಡಳಿಯು ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

More articles

Latest article

Most read