ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವವರಿಗೆ.. ಡ್ಯಾನ್ಸ್ ಇಷ್ಟಪಟ್ಟು ನೋಡುವವರಿಗೆ ಕಿಶನ್ ಬಿಳಗಲಿ ವಿಡಿಯೋಗಳ ಪರಿಚಯ ಖಂಡಿತ ಇರುತ್ತದೆ. ನಮ್ರತಾ ಹಾಗೂ ಕಿಶನ್ ಹೆಚ್ಚಾಗಿ ಜೋಡಿಗಳಾಗಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ರೊಮ್ಯಾಂಟಿಕ್ ಫೀಲ್ ಕೊಡುವ ಡ್ಯಾನ್ಸ್ಗಳನ್ನೇ ಮಾಡುತ್ತಾರೆ. ಈಗಾಗಲೇ ಅನುಪಮಾ ಗೌಡ, ಸಂಯುಕ್ತ ಹೆಗ್ಡೆ, ಚೈತ್ರಾ ಆಚಾರ್, ದೀಪಿಕಾ ದಾಸ್ ಜೊತೆಗೆ ಈಗಾಗಲೇ ಡ್ಯಾನ್ಸ್ ಮಾಡಿದ್ದಾರೆ. ಮೈರೋಮಾಂಚನವಾಗುವಂತಹ ಸ್ಟೆಪ್ಗಳನ್ನೇ ಹಾಕಿದ್ದಾರೆ. ಇದೀಗ ರಾಗಿಣಿ ದ್ವಿವೇದಿ ಜೊತೆಗೂ ಅಷ್ಟೇ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದಾರೆ.
ರಾಗಿಣಿ ಹಾಗೂ ಕಿಶನ್ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಜೋ ಹಾಲ್ ದಿಲ್ ಕಾ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಿಶನ್ ಜೊತೆ ಕಿಕ್ಕೇರಿಸುವಂತೆ ರಾಗಿಣಿ ಕುಣಿದಿದ್ದಾರೆ. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೀವ್ಸ್ ಆಗ್ತಾ ಇದೆ. ಲೈಕ್ಸ್ ಕಮೆಂಟ್ಗಳೇ ಹೆಚ್ಚು ಗಮನ ಸೆಳೆಯುತ್ತಿವೆ.
ಕಿಶನ್ ಹಾಗೂ ರಾಗಿಣಿ ಡ್ಯಾನ್ಸ್ ಗೆ ಬಂದಿರುವ ಕಮೆಂಟ್ಗಳನ್ನ ನೋಡ್ತಾ ಇದ್ರೆ ಕಿಶನ್ ಮೇಲೆ ಅದೆಷ್ಟು ಜನಕ್ಕೆ ಹೊಟ್ಟೆ ಕಿಚ್ಚು ಇದ್ದಂತೆ ಕಾಣುತ್ತಿದೆ. ಆಂಕರ್ ನಿರಂಜನ್ ದೇಶಪಾಂಡೆ ಕೂಡ ಕಿಶನ್ ಕಾಲೆಳೆದಿದ್ದಾರೆ. ‘ರಾಜಾ ಒಳ್ಳೆ ಮಚ್ಚೆ ಇದೆ ನಿಂಗೆ, ಸೂಪರ್ ರೀಲ್’ ಎಂದು ಕಮೆಂಟ್ ಹಾಕಿದ್ದಾರೆ. ಅದಕ್ಕೆ ಸಕತ್ ರಿಪ್ಲೆಗಳು ಬಂದಿವೆ. ಹೆಚ್ಚಾಗಿ ಬಂದಿರುವ ಕಮೆಂಟ್ಗಳೆಲ್ಲಾ, ಏನ್ ಗುರು ನಿನ್ ಅದೃಷ್ಟ, ಯಾರನ್ನೂ ಬಿಡಲ್ವಲ್ಲ ನೀನು ಅಂತ ಒಬ್ಬ ಹಾಕಿದ್ರೆ, ಪ್ರಜ್ವಲ್ ರೇವಣ್ಣನನ್ನೇ ಮೀರಿಸ್ತೀಯಲ್ಲ ಅಂತ ಇನ್ನೊಬ್ಬ ಹಾಕಿದ್ದಾರೆ.
ಇದೆಲ್ಲದರ ನಡುವೆ ನೆಟ್ಟಿಗರಿಗೆ ಇನ್ನಷ್ಟು ಪ್ರಶ್ನೆಗಳು ಕಾಡುತ್ತಿವೆ. ಕಿಶನ್ ಡ್ಯಾನ್ಸ್ ಸ್ಟೈಲ್ ಗೆ ನಟಿಯರೇ ಹುಡುಕಿ ಬರೋದಾ ಅಥವಾ ಕಿಶನ್ ನಟಿಯರನ್ನ ಅಪ್ರೋಚ್ ಮಾಡ್ತಾರಾ ಎಂಬುದೇ ದೊಡ್ಡ ಅನುಮಾನವಾಗಿದೆ. ಆದ್ರೂ ಕಿಶನ್ ಗೆ ಇಷ್ಟೊಂದು ಡಿಮ್ಯಾಂಡ್ ಹ ಗುರು..?