ಪಂಜಾಬ್‌ ಮಾಜಿ ಡಿಸಿಎಂ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡಿನ ದಾಳಿ; ಅಪಾಯದಿಂದ ಪಾರು

Most read

ನವದೆಹಲಿ: ಶಿರೋಮಣಿ ಅಕಾಲಿದಳದ ನಾಯಕ ಮತ್ತು ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಅಮೃತ್‌ಸರದ ಗೋಲ್ಡನ್ ಟೆಂಪಲ್‌ನಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, 62 ವರ್ಷದ ಬಾದಲ್ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಬುಧವಾರ ಬೆಳಿಗ್ಗೆ ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶ ದ್ವಾರದಲ್ಲಿ ಈ ದುರ್ಘಟನೆ ನಡೆದಿದೆ. ಪ್ರಾರ್ಥನೆ ನೆಪದಲ್ಲಿ ಒಳ ಬಂದ ವ್ಯಕಿಯೊಬ್ಬ ಮುಚ್ಚಿಟ್ಟುಕೊಂಡಿದ್ದ ಗನ್ ಅನ್ನು ಹೊರತೆಗೆದು ಏಕಾಏಕಿ ಗುಂಡು ಹಾರಿಸಿದ್ದಾನೆ. ಈತ ಗುಂಡು ಹಾರಿಸುತ್ತಿದ್ದನ್ನು ಗಮನಿಸಿದ ವ್ಯಕ್ತಿಯೊಬ್ಬರು ಗನ್ ಹಿಡಿದಿದ್ದವನ ಮೇಲೆ ಎರಗಿ ಆತನ ಗುರಿಯನ್ನು ತಪ್ಪಿಸಿದ್ದಾರೆ. ಆದರೂ ಸತತ ನಾಲ್ಕೈದು ಸುತ್ತು ಗುಂಡು ಹಾರಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗೋಲ್ಡನ್ ಟೆಂಪಲ್‌ಗೆ ಪಾರ್ಥನೆಗೆ ಆಗಮಿಸಿದ್ದ ಜನರು ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಹಿಡಿದು ಆತನ ಮೇಲೆ ದಾಳಿ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಿಖ್ ಧರ್ಮ ಗ್ರಂಥ ಗುರು ಗ್ರಂಥ ಸಾಹೀಬ್ ಅನ್ನು ಅವಮಾನಿಸಿದ್ದ ವಿವಾದಿತ ಸಂತ ರಾಮ್ ರಹೀಂಗೆ ಕ್ಷಮೆ ನೀಡಿದ್ದ ಕಾರಣಕ್ಕೆ ಸಿಖ್ ಧಾರ್ಮಿಕ ಮಂಡಳಿ ಅಕಾಲ್ ತಖ್ತ್ನಿಂದ ಬಾದಲ್ ಶಿಕ್ಷೆಗೊಳಗಾಗಿದ್ದರು. ಗೋಲ್ಡನ್ ಟೆಂಪಲ್ ಪ್ರವೇಶದ್ವಾರದಲ್ಲಿ ಅವರು ವ್ಹೀಲ್‌ ಚೇರ್‌ ನಲ್ಲಿ ಕುಳಿತು ಸೇವಾದಾರ್ ಶಿಕ್ಷೆ ಅನುಭವಿಸುತ್ತಿದ್ದರು. ಈ ವೇಳೆ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಗೆ ಪ್ರಯತ್ನಿಸಲಾಗಿದೆ. ದಾಳಿ ನಡೆಸಿದವನನ್ನು ನಾರಾಯಣಸಿಂಗ್‌ ಚೌರಾ ಎಂದು ಗುರುತಿಸಲಾಗಿದೆ.

ಭದ್ರತೆ ಒದಗಿಸಲು ಪಂಜಾಬ್ ಸರ್ಕಾರ ವಿಫಲವಾಗಿದೆ ಎಂದು ಶಿರೋಮಣಿ ಅಕಾಲಿ ದಳ ಆರೋಪಿಸಿದೆ. ಆದರೆ ಪೊಲೀಸರು ಈ ಆರೋಪವನ್ನು ಅಲ್ಲಗಳೆದಿದ್ದಾರೆ.

More articles

Latest article