ಕೋಲಾರ : ಮುಂಜಾನೆ ನಸುಕಿನಿಂದಲೇ ಸುಮಾರು 150 ಕ್ಕೂ ಹೆಚ್ಚು ಅನಧಿಕ್ರತ ಅರಣ್ಯ ಭೂಮಿ ತೆರವು ಕಾರ್ಯಾಚರಣೆಗೆ ಅಧಿಕಾರಿಗಳ ತಂಡ ಮುಂದಾಗಿದ್ದು, ಬೆಳ್ಳಂಬೆಳಗ್ಗೆ ಜೆ ಸಿ ಬಿ ಗಳ ಘರ್ಜನೆ ಶುರುಮಾಡಿಕೊಂಡಿವೆ.
ಕೋಲಾರ ತಾಲ್ಲೂಕು ಅಬ್ಬಣಿ ಅರಣ್ಯ ಪ್ರದೇಶದಲ್ಲಿನ ಸುಮಾರು 150 ಕ್ಕೂ ಹೆಚ್ಚು ಅನಧಿಕ್ರತ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಅರಣ್ಯಾಧಿಕಾರಿಗಳು ನಡೆಸುತ್ತಿದ್ದಾರೆ.
ಮುಂಜಾನೆ ನಸುಕಿನಿಂದಲೇ ಬಿಗಿ ಪೋಲೀಸು ಪಹರೆಯೊಂದಿಗೆ ಫೀಲ್ಡಿಗಿಳಿದಿರುವ ಅಧಿಕಾರಿಗಳ ತಂಡ ಹುತ್ತೂರು ಹೋಬಳಿಯ ಅಬ್ಬಣಿ ಅರಣ್ಯ ಪ್ರದೇಶ ಶಿಳ್ಳಂಗೃರೆ, ಹರಟಿ, ಮಲ್ಲಾಂಡಹಳ್ಳಿ, ಕೋಟಿಗಾನಹಳ್ಳಿ ಹಾಗೂ ಅರಳಕುಂಟೆ ಗ್ರಾಮಗಳಿಗೆ ಒಳಪಟ್ಟಿರುವ ಅನಧಿಕ್ರತ ಒತ್ತುವರಿಧಾರರ ಜಾಗವನ್ನು ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆ 1963 ಸೆಕ್ಷನ್ 64–ಎ ಪ್ರಕಾರ ಅರಣ್ಯ ಉಪ ಸಂರಕ್ಷಣಾಧಿಕಾರಿ ಸರೀನಾ ಚಿಕ್ಕಲಿಗಾರ್ ರವರ ನೇತೃತ್ವದಲ್ಲಿ ಗುರುತಿಸಿ ತೆರವು ಕಾರ್ಯಾಚರಣೆನಡೆಸಲಾಗುತ್ತಿದೆ.
ತೆರುವು ಕಾರ್ಯಾಚರಣೆ ವೇಳೆಯಲ್ಲಿ ಗ್ರಾಮಸ್ಥರು ಅಡ್ಡಿಸುವ ಸಾಧ್ಯತೆಗಳಿರುವುದರಿಂದ ಹೆಚ್ಚಿನ ಪೋಲೀಸು ಭದ್ರತೆ ಏರ್ಪಡಿಸಲಾಗಿದೆ.