ಅರಣ್ಯ ಒತ್ತುವರಿ: ವಿಚಾರಣೆಗೆ ಹಾಜರಾಗುವಂತೆ ವಿಧಾನಸಭೆ ಮಾಜಿ ಅಧ್ಯಕ್ಷ ‌ರಮೇಶ್‌ ಕುಮಾರ್‌ ಗೆ ಅರಣ್ಯ ಇಲಾಖೆ ನೋಟಿಸ್

Most read

ಅರಣ್ಯ ಒತ್ತುವರಿ: ವಿಚಾರಣೆಗೆ ಹಾಜರಾಗುವಂತೆ ಕೈ ಮುಖಂಡ, ವಿಧಾನಸಭೆ ಮಾಜಿ ಅಧ್ಯಕ್ಷ ‌ ರಮೇಶ್‌ ಕುಮಾರ್‌ ಗೆ ಅರಣ್ಯ ಇಲಾಖೆ ನೋಟಿಸ್


ಕೋಲಾರ: ಅರಣ್ಯ ಒತ್ತುವರಿ ಪ್ರಕಣದಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.‌ ರಮೇಶ್‌ ಕುಮಾರ್‌, ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಶ್ರೀನಿವಾಸಪುರ ವಲಯದ ಅರಣ್ಯಾಧಿಕಾರಿಗೆ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿಗಳು  ನೋಟಿಸ್‌ ನೀಡಿದ್ದಾರೆ. ಕೋಲಾರ ಜಿಲ್ಲೆಯ
ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ 1 ಮತ್ತು 2ರ ಅರಣ್ಯ ಜಮೀನಿನಲ್ಲಿ 60.23 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಜಂಟಿ ಸಮೀಕ್ಷೆ ತಂಡವು ಗುರುತಿಸಿ ವರದಿ ನೀಡಿದ ಬೆನ್ನಲ್ಲೇ ಮುಂದಿನ ಕ್ರಮಕ್ಕಾಗಿ ನೋಟಿಸ್‌
ನೀಡಿದ್ದಾರೆ.

ಫೆಬ್ರವರಿ .20ರ ಮಧ್ಯಾಹ್ನ 3 ಗಂಟೆಗೆ ಮೇಲ್ಮನವಿ ಪ್ರಾಧಿಕಾರದಿಂದ ಮೇಲ್ಮನವಿಯ ವಿಚಾರಣೆ ನಿಗದಿಪಡಿಸಿದ್ದು, ತಪ್ಪದೇ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ.

ರಿಟ್‌ ಅರ್ಜಿ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶದಂತೆ ಮೇಲ್ಮನವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಮೋಜಣಿ ಕಾರ್ಯವು ಮುಕ್ತಾಯಗೊಂಡು ವರದಿ ಹಾಗೂ ನಕಾಶೆಯು ಸ್ವೀಕೃತವಾಗಿದೆ. ಈ ಹಿನ್ನೆಲೆಯಲ್ಲಿ ಮೇಲ್ಮನವಿ ವಿಚಾರಣೆ ನಿಗದಿಪಡಿಸಲಾಗಿದೆ ಎಂದು
ತಿಳಿಸಲಾಗಿದೆ. ರಮೇಶ್‌ ಕುಮಾರ್ ಅವರು ಹೈಕೋರ್ಟ್‌ನಲ್ಲಿ ದಾಖಲಿಸಿದ್ದ 2010 ಮತ್ತು 2012ರ ರಿಟ್‌ ಅರ್ಜಿ ಸಂಬಂಧ 2013ರಲ್ಲಿ ಹೈಕೋರ್ಟ್‌ ತೀರ್ಪು ನೀಡಿತ್ತು.

ಅರಣ್ಯ ಸಂರಕ್ಷಣಾಧಿಕಾರಿಗಳು ಜಂಟಿ ಸಮೀಕ್ಷೆ ವರದಿಯನ್ನು ಈಗಾಗಲೇ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಸರ್ವೆ ನಂಬರ್‌ 1ರಲ್ಲಿ 6 ಎಕರೆ ಹಾಗೂ ಸರ್ವೆ ನಂಬರ್‌ 2ರಲ್ಲಿ 54.23 ಎಕರೆ ಒತ್ತುವರಿ ಆಗಿದೆ ಎನ್ನುವುದು ವರದಿಯಲ್ಲಿ ಉಲ್ಲೇಖವಾಗಿದೆ. ಹೈಕೋರ್ಟ್‌
ಸೂಚನೆಯಂತೆ ರಮೇಶ್‌ ಕುಮಾರ್‌ ಉಪಸ್ಥಿತಿಯಲ್ಲೇ ಜಂಟಿ ಸಮಿಕ್ಷೆ ನಡೆದಿತ್ತು. ಸರ್ವೆಗೆ 9ನೇ ಪ್ರತಿವಾದಿಯಾಗಿದ್ದ ಅವರೂ ಸಹಕಾರ ನೀಡಿದ್ದರು.

ಜ.15 ಹಾಗೂ 16ರಂದು ಸತತ ಎರಡು ದಿನ ಜಿಲ್ಲಾಧಿಕಾರಿ ಎಂ.ಆರ್.ರವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಸರೀನಾ ಸಿಕ್ಕಲಿಗಾರ್‌ ಹಾಗೂ ಭೂಮಾಪನ ಇಲಾಖೆ ಉಪನಿರ್ದೇಶಕ (ಡಿಡಿಎಲ್‌ಆರ್‌) ಸಂಜಯ್‌ ಅವರನ್ನು ಒಳಗೊಂಡ ತಂಡ ಜಂಟಿ ಸರ್ವೆ
ನಡೆಸಿತ್ತು. ವರದಿಗೆ ಮೂವರೂ ಸಹಿ ಹಾಕಿ ಜಂಟಿ ನಕ್ಷೆ ಮತ್ತು ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

More articles

Latest article