ಭರತ್ ಶೆಟ್ಟಿಯವರಿಗೆ ಈ‌ ನೆಲದ ಕಾನೂನು ಕಾಲ‌ ಕೆಳಗಿನ ಕಸವೇ??

Most read

ಹೊಡಿ ಬಡಿ ಸಂಸ್ಕೃತಿಯ ಬಿಜೆಪಿಗೆ ದ್ವೇಷ ಹರಡದಿದ್ದರೆ ಚುನಾವಣೆ ಗೆಲ್ಲಲು ಸಾಧ್ಯವೇ ಇಲ್ಲ. ಇದನ್ನು ಚೆನ್ನಾಗಿ ಬಲ್ಲ ಮಂಗಳೂರು ಶಾಸಕ ಭರತ್ ಶೆಟ್ಟಿಯವರು ‌ಇದನ್ನು ಬಿಟ್ಟರೆ ಬೇರೆ ಏನನ್ನೂ ಮಾಡುತ್ತಲೇ ಇಲ್ಲ !!

ರಾಹುಲ್‌ ಗಾಂಧಿಯವರು ಹೇಳಿದ್ದು  ಹಿಂದೂ ಧರ್ಮವನ್ನು ಬಿಜೆಪಿ ಅಥವಾ ಮೋದಿ ಗುತ್ತಿಗೆ ಪಡೆದಿಲ್ಲ, ಬಿಜೆಪಿ ಸದಾ ಹರಡುತ್ತಿರುವ ದ್ವೇಷವನ್ನು ಹಿಂದೂ ಧರ್ಮ ಆಗಲೀ ಯಾವ ಧರ್ಮವೂ  ಬೋಧನೆ ಮಾಡುವುದಿಲ್ಲ, ಹಿಂದುತ್ವದ ಹೆಸರಲ್ಲಿ ಬಿಜೆಪಿ ದ್ವೇಷ, ಹಿಂಸೆ ಹರಡುತ್ತಾ ಇದೆ ಎಂಬುದಾಗಿ. 

ರಾಹುಲ್‌ ಹೇಳಿದ ಪ್ರತಿಯೊಂದು ಮಾತು ಕೂಡ  ಸೂರ್ಯ ಚಂದ್ರ ಇರುವಷ್ಟೇ ಸತ್ಯ ಸಂಗತಿ 

ಇದ್ದಿದ್ದನ್ನು‌ ಇದ್ದ ಹಾಗೆ ಹೇಳಿದರೆ ಕೆಟ್ಟ ಕೋಪ‌ ಶೆಟ್ಟರಿಗೆ ಬಂದಿದ್ದು ಸಹಜ. ಆದರೆ ಆ‌ ಕೋಪದಲ್ಲಿ ಶೆಟ್ಟಿಯವರು ರಾಹುಲ್ ಗಾಂಧಿಯವರಿಗೆ ಕೆನ್ನೆಗೆ ಬಾರಿಸುತ್ತಾರಂತೆ!! ಕೆನ್ನೆಗೆ ಬಾರಿಸುವುದೆಂದರೆ ಕಾನೂನನ್ನು ಕೈ ಗೆತ್ತಿಕೊಳ್ಳುವುದು. ರಾಹುಲ್‌ ಗಾಂಧಿ ಇವತ್ತು ಸಂಸತ್ತಿನಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕ. ಪ್ರಧಾನಿಯಷ್ಟೇ ಮಹತ್ತರವಾದ ಹುದ್ದೆಯಲ್ಲಿರುವ ರಾಹುಲ್ ಗೆ ಭರತ್ ಕೆನ್ನೆಗೆ ಹೊಡೆಯುತ್ತಾರೆ ಎಂಬ ಹೇಳಿಕೆ‌ ನೀಡಿದಾಗ ಗಮನಿಸಬೇಕಾದ ಅಂಶ ಏನೆಂದರೆ ಭರತ ಶೆಟ್ಟಿ ಯವರಿಗೆ ಈ ದೇಶದ ಕಾನೂನಿನ ಮೇಲೆ ಎಷ್ಟು‌ ಗೌರವ ಇದೆ ಎಂಬುದನ್ನು. ಹೊಡೆಯುವುದು, ಬಡಿಯುವುದು, ಕೊಲ್ಲುವುದು ಇತ್ಯಾದಿ ಪ್ರಚೋದನಾಕಾರಿ ಹೇಳಿಕೆಗಳಿಂದ ಅದೆಷ್ಟೋ ಯುವಕರ ಬಾಳು ಹಾಳು ಮಾಡಿ ಹೇಳಿಕೆ ನೀಡಿದ ಈ ನಾಯಕರುಗಳೆಲ್ಲಾ ಶಾಸಕ, ಸಂಸದ ಆಗುತ್ತಾ ಇರುವುದು ಕರಾವಳಿಯಲ್ಲಿ ಮೂರು ದಶಕಗಳಿಂದ ನಡೆಯುತ್ತಾ ಇರುವುದು ಕರಾವಳಿಗರ ದೌರ್ಭಾಗ್ಯ !!

ಬಿಜೆಪಿಯವರಿಗೆ ಹೊಡೆಯುವುದು ಬಡಿಯುವುದು ಮಾತ್ರ ತೋಚುತ್ತಾ ಇರುವಾಗ ಭಾರತ ದೇಶದ ಜನ ಇದರಿಂದ ರೋಸಿ ಹೋಗಿ ಬಹುತೇಕ ಭಾಗಗಳಲ್ಲಿ ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾ ಇರುವುದು ಮಹತ್ವದ ಬೆಳವಣಿಗೆ. ಕಾನೂನು ಬಾಹಿರವಾಗಿ ಸರಕಾರವೇ ಬುಲ್ ಡೋಜರ್ ಹರಿಸಿ ಜನರ ನಿವಾಸಗಳನ್ನು ಕೆಡವುತ್ತಾ ಇರುವ ಉತ್ತರ ಪ್ರದೇಶದಲ್ಲೇ ಬಿಜೆಪಿಗೆ ಹಿನ್ನಡೆ ಬಂದಿರುವುದು ಕರಾವಳಿಯ ಬಿಜೆಪಿ ಶಾಸಕರಿಗೆ ಪಾಠ ಆಗಬೇಕಿತ್ತು. ಆದರೆ ವೇದವ್ಯಾಸ ಕಾಮತ್, ಹರೀಶ್ ಪೂಂಜಾ ಹಾಗೂ ಈ ಭರತ್ ಶೆಟ್ಟಿ ಬಾಯಿಗೆ ಬಂದ ಹಾಗೆ ಮಾತನಾಡುವುದರಲ್ಲಿ ಪರಸ್ಪರ ಸ್ಪರ್ಧೆಗೆ ಇಳಿದವರಂತೆ ಮಾತನಾಡುತ್ತಾ ಇದ್ದಾರೆ.

ಮುಂದುವರೆದ ನಾಗರಿಕತೆಯಲ್ಲಿ ಮನುಕುಲ ಇವತ್ತು ಹೊಡಿ‌ಬಡಿ ಸಂಸ್ಕೃತಿಯನ್ನು ‌ದಾಟಿ ಬಂದು ಶತಮಾನಗಳಾದರೂ ಹಳೇ ಶಿಲಾಯುಗದ ಪಳೆಯುಳಿಕೆಗಳಂತೆ ಕೆಲ‌ ಬಿಜೆಪಿ ಶಾಸಕರು ಮಾತಾಡುತ್ತಾ ಇರುವುದನ್ನು ಕಂಡರೆ ಇವರಿಗೆ ವಿನಾಶಕಾಲೇ ವಿಪರೀತ ಬುದ್ಧಿ ಎಂದರೆ ತಪ್ಪಾಗಲಿಕ್ಕಿಲ್ಲ 

ರಾಹುಲ್ ರವರು ದ್ವೇಷದ ವಿರುದ್ಧ ‌ಹೋರಾಡಿ ದೇಶದ ಬಹುತೇಕ‌ ಭಾಗಗಳಲ್ಲಿ ಪ್ರೀತಿಯನ್ನು ಗೆಲ್ಲಿಸಿದವರು. ಕರಾವಳಿಯಲ್ಲೂ ಭರತ್ ಶೆಟ್ಟಿಯಂತಹ ರೌಡಿ ಮಾದರಿಯ ಶಾಸಕರನ್ನು ಸೋಲಿಸಿ ಪ್ರೀತಿಯ ಅಂಗಡಿಗಳು ತೆರೆಯಲ್ಪಡುವ ದಿನಗಳು ದೂರ ಇಲ್ಲ ಎಂದು ಆಶಿಸೋಣ. ಆ‌‌ ನಿಟ್ಟಿನಲ್ಲಿ ‌ಶ್ರಮಿಸೋಣ. ಯಾವುದೇ ಪ್ರಚೋದನೆಗಳೊಗಾಗದೇ ಭರತ್ ಶೆಟ್ಟಿ ಅದೇನೇ ಮಾತಾಡಿದರೂ ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆಯೇ ವಿನಹ ಶಾಂತಿ ಪ್ರೀತಿ ‌ಹರಡುವವರ ಎದುರು ಅವರು ಯಾವ ಲೆಕ್ಕವೂ ಅಲ್ಲ ಎಂಬ ಭಾವನೆಯೊಡನೆ ಕರಾವಳಿಯಲ್ಲಿನ ಸೌಹಾರ್ದತೆ ಹಾಗೂ‌ ಸಹೋದರತೆಗಾಗಿ ಕೆಲಸ ಮಾಡೋಣ

ಅಮೃತ್‌ ಶೆಣೈ, ಉಡುಪಿ
ಸಾಮಾಜಿಕ ಕಾರ್ಯಕರ್ತರು

ಈ ಸುದ್ದಿಯನ್ನೂ ಓದಿ- ರಾಹುಲ್ ಗಾಂಧಿ ದೊಡ್ಡ ಹುಚ್ಚ, ಅವನ ಕೆನ್ನೆಗೆ ಬಾರಿಸಬೇಕು ಎಂದಿದ್ದ ಭರತ್ ಶೆಟ್ಟಿ ವಿರುದ್ಧ ದೂರು ದಾಖಲು

More articles

Latest article