ಕೋಲಾರ: ತಾಲೂಕಿನ ಬಸವನತ್ತ ಬಳಿ ಇರುವ ವಿದ್ಯಾಜ್ಯೋತಿ ಪಿಯು ಕಾಲೇಜಿನ ವಸತಿ ನಿಲಯದಲ್ಲಿ ತಿಂಡಿ ಸೇವಿಸಿದ ಸುಮಾರು 30 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಇವರು ತಡರಾತ್ರಿ ಈರುಳ್ಳಿ ದೋಸೆ, ಇಡ್ಲಿ, ಚಟ್ನಿ ಸೇವಿಸಿದ್ದಾರೆ ನಂತರ ವಾಂತಿ,ಬೇದಿಯಿಂದ ಬಳಲುತ್ತಿದ್ದ ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸ್ಟೆಲ್ ನಲ್ಲಿ ಒಟ್ಟು 50 ಜನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿದ್ದರು. ಕೋಲಾರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾಜ್ಯೋತಿ ಕಾಲೇಜಿಗೆ ತಹಶೀಲ್ದಾರ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಳನೆ ನಡೆಸಿದ್ದಾರೆ.
ಮೂವರು ಕಳ್ಳರ ಬಂಧನ: ಕೋಲಾರ ಜಿಲ್ಲೆಯ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ಪೋಲೀಸರು ಕಳವುˌ ಹಾಗೂ ಮನೆಗಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಗಾರಪೇಟೆ ತಾಲ್ಲೂಕು ಚಿನ್ನಕೋಟೆ ಗ್ರಾಮದ ರಾಜೇಂದ್ರ ಹಾಗೂ ನೆಲ್ಸನ್ ರಾಜಾ ಮತ್ತು ಆಂಧ್ರ ಪ್ರದೇಶದ ಗೊಳಗೂರು ಗ್ರಾಮದ ಮುರುಗೇಶ ಬಂಧಿತ ಆರೋಪಿಗಳು. ಪಿಎಸ್ ಐ ಅರುಣ್ ಗೌಡ ಪಾಟೀಲ್ ಮತ್ತು ಅವರ ತಂಡ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳಿಂದ 66 ಗ್ರಾಂ ಬಂಗಾರದ ಒಡವೆಗಳು, 1 ಕೆ.ಜಿ 500 ಗ್ರಾಂ ಬೆಳ್ಳಿ ಮತ್ತು 1 ಮಾನೀಟರ್ ಹಾಗೂ ಕೃತ್ಯಕ್ಕೆ ಬಳಸಿದ ಇಟಿಯೊಸ್ ಕಾರು ಸೇರಿದಂತೆ ಒಟ್ಟು 8 ಲಕ್ಷ ಮೌಲ್ಯದ ಕಳವು ಮಾಲನ್ನು ವಶಕ್ಕೆ ಪಡೆದಿದ್ದಾರೆ.