ಪತಿಯ ಹುಟ್ಟುಹಬ್ಬ ಆಚರಿಸಲು ಹೊರಟಿದ್ದ ಬೆಂಗಳೂರಿನ ಟೆಕಿಯೂ ವಿಮಾನ ದುರಂತದಲ್ಲಿ ಸಾವು

ಇಂದೋರ್: ಅಹಮದಾಬಾದ್ ವಿಮಾನ ದುರಂತದಲ್ಲಿ ಮರಣಹೊಂದಿದ ಎಲ್ಲ 275 ಪ್ರಯಾಣಿಕರದ್ದು ಒಂದೊಂದು ರೀತಿಯ ಕಥೆ. ಪೋಷಕರು, ಪತಿ, ಪತ್ನಿ, ಹೊಸ ಉದ್ಯೋಗ, ಹೊಸ ಬದುಕು ಕಟ್ಟಿಕೊಳ್ಳಲು ಹೊರಟವರು ವಿಮಾನ ಗಗನಕ್ಕೆ ಚಿಮ್ಮಿದಕೆಲವೇ ಕ್ಷಣಗಳಲ್ಲಿ ಸುಟ್ಟು ಬೂದಿಯಾಗಿದ್ದಾರೆ. ಅವರ ನಿರೀಕ್ಷೆಯಲ್ಲಿದ್ದ ಬಂಧುಬಳಗದವರು ಕಣ್ಣೀರಕೋಡಿಯಲ್ಲಿ ಮುಳುಗಿದ್ದಾರೆ.

ಪತಿಯ ಹುಟ್ಟುಹಬ್ಬವನ್ನು ಆಚರಿಸಲು ಲಂಡನ್‌ಗೆ ತೆರಳುತ್ತಿದ್ದ ನ ಮಹಿಳೆಯೊಬ್ಬರ ಖುಷಿ ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಬೂದಿಯಾಗಿದೆ.

ಇಂದೋರ್‌ ಮೂಲದ  28 ವರ್ಷದ ಹರ್‌ ಪ್ರೀತ್‌ ಬೆಂಗಳೂರಿನ ಐಟಿ ಕಂಪನಿಯೊಂದರ ಉದ್ಯೋಗಿ.  ಲಂಡನ್‌ನಲ್ಲಿರುವ ಪತಿಯ ಹುಟ್ಟುಹಬ್ಬ ಆಚರಿಸಲು ಈ ದುರಂತ ವಿಮಾನ ಹತ್ತಿದ್ದರು. ಈಕೆಯ ಪತಿ‌ ರಾಬಿ ಹೊರಾ ಪತ್ನಿಯ ಆಗಮನದ ನಿರೀಕ್ಷೆಯಲ್ಲಿದ್ದರು. ಆದರೆ ನಡೆದಿದ್ದೇ ಬೇರೆ.

ವಿಧಿಯ ಲೆಕ್ಕಾಚಾರ ಹೇಗಿರುತ್ತದೆ ಎಂದು ಹೇಳಲು ಬಾರದು. ಆರಂಭದಲ್ಲಿ ಹರ್‌ ಪ್ರೀತ್ ಜೂನ್ 19ರಂದು ಲಂಡನ್‌ಗೆ ಪ್ರಯಾಣಿಸಬೇಕಿತ್ತು.  ಪತಿಯ ಹುಟ್ಟುಹಬ್ಬದಲ್ಲಿ ಭಾಗಿಯಾಗಲು ಜೂನ್ 12ಕ್ಕೆ ಮರು ನಿಗದಿ ಮಾಡಿಕೊಂಡಿದ್ದರು. ಆದರೆ ನಡೆದಿದ್ದೇ ಬೇರೆ ಎಂದು ಆಕೆಯ ಸಹೋದರ ರಾಜೇಂದ್ರ ಸಿಂಗ್ ಹೊರಾ ಹೇಳುತ್ತಾರೆ.

ಲಂಡನ್‌ ತಲುಪಿದ ನಂತರ ದಂಪತಿ ಯುರೋಪ್ ಪ್ರವಾಸ ಕೈಗೊಳ್ಳಲು ಉದ್ದೇಶಿಸಿದ್ದರು. ಆದರೆ ವಿಧಿಲಿಖಿತವೇ ಬೇರೆಯಾಗಿತ್ತು. ಹರ್‌ ಪ್ರೀತ್ ಲಂಡನ್‌ಗೆ ಹೋಗುವ ಮೊದಲು ಅಹಮದಾಬಾದ್‌ ನಲ್ಲಿರುವ ತನ್ನ ಪೋಷಕರನ್ನು ಭೇಟಿ ಮಾಡಿ ಅವರೊಂದಿಗೆ ಕೆಲ ಸಮಯ ಕಳೆದಿದ್ದರು.

ಹರ್‌ ಪ್ರೀತ್‌ ವಿಮಾನ ಹತ್ತುವ ಮೊದಲು, ನಮ್ಮ ಕುಟುಂಬದ ವಾಟ್ಸಾಪ್ ಗ್ರೂಪ್‌ ನಲ್ಲಿ ಆಕೆಯ ಪ್ರವಾಸ ಶುಭಕರವಾಗಿರಲಿ ಎಂದು ಹಾರೈಸಿದ್ದೆವು. ಆಕೆಯೂ ಎಲ್ಲರಿಗೂ ಧನ್ಯವಾದ ಹೇಳಿದ್ದಳು. ಯೌಾಗ ಪತಿಯನ್ನು ಭೇಟಿಯಾಗುವೆನೋ ಎಂಬ ಉತ್ಸುಕತೆ ಅವಳ ಮುಖದಲ್ಲಿ ಎದ್ದು ಕಾಣುತ್ತಿತ್ತು ಎಂದು ಮತ್ತೊಬ್ಬ ಸಂಬಂಧಿ ನೆನಪಿಸಿಕೊಳ್ಳುತ್ತಾರೆ.

More articles

Latest article

Most read