ಐಟಿ ಇಲಾಖೆ ಕೇಂದ್ರ ಕಚೇರಿಗೆ ಬಿತ್ತು ಬೆಂಕಿ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿ ಇರುವ ಕಟ್ಟಡಕ್ಕೆ ಬೆಂಕಿ ತಗುಲಿಕೊಂಡಿದ್ದು, ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಗಿದೆ.

ಐಟಿ ಇಲಾಖೆಯ ಕಚೇರಿ ಇರುವ ಸೆಂಟ್ರಲ್‌ ರೆವಿನ್ಯೂ ಕಟ್ಟಡದಲ್ಲಿ ಮಧ್ಯಾಹ್ನ ದಿಢೀರನೆ ಬೆಂಕಿ ಕಾಣಿಸಿಕೊಂಡು ಹರಡುತ್ತ ಬಂದಿತು. ಇದುವರೆಗೆ ಯಾವುದೇ ಸಾವು ನೋವಿನ ವರದಿಗಳಾಗಿಲ್ಲ.

ಮಧ್ಯಾಹ್ನ 3.07 ಗಂಟೆಗೆ ನಮಗೆ ಬೆಂಕಿ ಬಿದ್ದಿರುವ ಮಾಹಿತಿ ದೊರೆಯಿತು. ಬೆಂಕಿ ನಂದಿಸುವ 21 ಟ್ಯಾಂಕರ್‌ ವಾಹನಗಳನ್ನು ಅಲ್ಲಿಗೆ ಕೊಂಡೊಯ್ದಿದ್ದೇವೆ.

ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕಾನೂನು ಸುವ್ಯವಸ್ಥೆ ಮತ್ತು ಮುಂದಿನ ಕ್ರಮಗಳನ್ನು ಅವರು ಜರುಗಿಸಲಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಅವಘಡದ ವಿಡಿಯೋಗಳು ಹೊರಬಂದಿದ್ದು, ಕಟ್ಟಡದೊಳಗೆ ಇದ್ದ ಜನರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದ ಕಿಟಕಿಗಳ ಸಜ್ಜೆಗಳ ಆಶ್ರಯ ಪಡೆದಿರುವುದನ್ನು ಗಮನಿಸಬಹುದಾಗಿದೆ.

More articles

Latest article

Most read