ನಗರದ ದಕ್ಷಿಣ ವಲಯ ಪದ್ಮನಾಭ ನಗರ ವ್ಯಾಪ್ತಿಯಲ್ಲಿ ಬರುವ ಯಡಿಯೂರು ಕೆರೆ ವಿಸರ್ಜನಾ ಕೊಳ(ಕಲ್ಯಾಣಿ)ಕ್ಕೆ ನೀರು ತುಂಬಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.
ಯಡಿಯೂರು ಕೆರೆಯ ವಿಸರ್ಜನಾ ಕೊಳದಲ್ಲಿ 2023ರಲ್ಲಿ 11 ದಿನಗಳ ಅವಧಿಯಲ್ಲಿ ಅಂದಾಜು 1,75,000 ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿತ್ತು.
ಈ ಬಾರಿ 7ನೇ ಸೆಪ್ಟೆಂಬರ್ 2024 ರಿಂದ 17ನೇ ಸೆಪ್ಟೆಂಬರ್ 2024ರವರೆಗೆ 11 ದಿನಗಳ ಅವಧಿಯವರೆಗೆ ಮಾತ್ರ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮೊದಲ 3 ದಿನಗಳ ಕಾಲ ಹೆಚ್ಚು ಗಣೇಶ ಮೂರ್ತಿಗಳು ವಿಸರ್ಜನೆಯಾಗಲಿದ್ದು, ವಿಸರ್ಜನಾ ಕೊಳ ಬಹುತೇಕ ಭರ್ತಿಯಾಗಲಿದೆ. ಈ ಹಿನ್ನೆಲೆಯಲ್ಲಿ 10ನೇ ಸೆಪ್ಟೆಂಬರ್ 2024 ರಂದು ಶುಚಿತ್ವ ಕಾರ್ಯದ ನಿಮಿತ್ತ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಇರುವುದಿಲ್ಲ. 11 ರಿಂದ 17ನೇ ತಾರೀಖಿನವರೆಗೆ ಮಾತ್ರ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಅಗತ್ಯ ಸೌಲಭ್ಯಗಳ ವ್ಯವಸ್ಥೆಗೆ ಪಾಲಿಕೆ ಕ್ರಮ ಕೈಗೊಂಡಿರುತ್ತದೆ.
18ನೇ ಸೆಪ್ಟೆಂಬರ್ 2024 ರಿಂದ ಸದರಿ ಕೆರೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಇರುವುದಿಲ್ಲ ಎಂದು ಪದ್ಮನಾಭ ನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.
ಪಿಓಪಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶವಿಲ್ಲ:
ಯಡಿಯೂರು ಕೆರೆ ವಿಸರ್ಜನಾ ಕೊಳದಲ್ಲಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ವಿಸರ್ಜನೆ ಮಾಡಲು ಅವಕಾಶ ನೀಡಲಾಗುವುದು. ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಓಪಿ) ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಅವಕಾಶ ನೀಡುವುದಿಲ್ಲ.
ಈ ವೇಳೆ ಪದ್ಮನಾಭ ನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು, ಬನಶಂಕರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಇನ್ನಿತರು ಉಪಸ್ಥಿತರು.