ಕೊರಗ ಸಮುದಾಯದ ಮಹಿಳಾ ಪಿ.ಎಚ್.ಡಿ ಸಾಧಕಿಯರಿಗೆ ಬುಡಕಟ್ಟು ಸಂಶೋಧನಾ ಸಂಸ್ಥೆಯ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ

Most read

ಮೈಸೂರು: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಆಯೋಜಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ದಲ್ಲಿ ರಾಜ್ಯದ ಬುಡಕಟ್ಟು ಮಹಿಳಾ ಸಾಧಕಿಯರೊಂದಿಗೆ ಉಡುಪಿ ಜಿಲ್ಲೆಯ ಕೊರಗ ಸಮುದಾಯದ ಮಹಿಳಾ ಡಾಕ್ಟರೇಟ್ ಪದವಿದಾರರನ್ನು ಅಭಿನಂದಿಸಲಾಗಿದೆ.

ಉಡುಪಿ ಜಿಲ್ಲೆಯ ಸಾಸ್ತಾನ ಸಮೀಪದ ಗುಂಡ್ಮಿಯ ಡಾ. ಸಬಿತಾ ಕೊರಗ ಇವರು ಪಿ.ವಿ.ಟಿ.ಜಿ ಬುಡಕಟ್ಟು ಮಹಿಳೆಯರಲ್ಲಿ ಡಾಕ್ಟರೇಟ್ ಪದವಿ ಪಡೆದ ಪ್ರಥಮ ಮಹಿಳೆಯಾಗಿರುತ್ತಾರೆ. ಪ್ರಸ್ತುತ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಡಾ. ಕಲಾವತಿ ಸೂರಾಲು ಇವರು ಬ್ರಹ್ಮಾವರ ತಾಲ್ಲೂಕಿನ ಕರ್ಜೆ ಸಮೀಪದ ಸೂರಾಲಿನವರಾಗಿದ್ದು ಹಂಪಿಯ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದು ಮೈಸೂರಿನಲ್ಲಿ ಸಂಶೋಧನಾಧಿಕಾರಿಯಾಗಿ ದುಡಿಯುತ್ತಿದ್ದಾರೆ ಎಂದು ದಿನಕರ ಕೆಂಜೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article