ರೈತ ಹೋರಾಟದ ಬಗ್ಗೆ ಕಮೆಂಟ್ ಮಾಡಿ ಬಹಿರಂಗವಾಗಿ ಕ್ಷಮೆಯಾಚಿಸಿದ ಕಂಗನಾ

Most read

ಕೃಷಿ ಕಾಯ್ದೆಯನ್ನು ಜಾರಿ ಗೊಳಿಸುವ ಕುರಿತಾಗಿ ನೀಡಿದ್ದ ಹೇಳಿಕೆ ನೀಡಿದ್ದ ನಟಿ, ಸಂಸದೆ ಕಂಗನಾ ರನೌತ್ ತನ್ನ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿರುವ ಕಂಗನಾ ರನೌತ್, ‘ನಾನೀಗ ಕೇವಲ ನಟಿಯಲ್ಲ, ಬಿಜೆಪಿ ಕಾರ್ಯಕರ್ತಳೂ ಹೌದು ಎಂಬುದನ್ನು ಮರೆಯಬಾರದಿತ್ತು, ನನ್ನ ಅಭಿಪ್ರಾಯದಿಂದ, ನನ್ನ ವಿಚಾರದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಕಂಗನಾ ರನೌತ್ ಹೇಳಿದ್ದಾರೆ.

ಇತ್ತೀಚೆಗಷ್ಟೆ ಕೃಷಿ ಕಾಯ್ದೆಯ ಬಗ್ಗೆ ಮಾತನಾಡುತ್ತಾ, ಕೃಷಿ ಕಾಯ್ದೆಗಳನ್ನು ಮರಳಿ ತರಬೇಕು, ಈ ಬಾರಿ ಕೃಷಿಕರೇ ಪ್ರಧಾನ ಮಂತ್ರಿಗಳ ಮುಂದೆ ಕೃಷಿ ಕಾಯ್ದೆಯನ್ನು ಮರಳಿ ತರುವಂತೆ ಬೇಡಿಕೆ ಇಡಬೇಕು ಎಂದಿದ್ದರು. ಈ ಕುರಿತು ತೀರ್ವ ವಿರೋಧ ಕೂಡ ವ್ಯಕ್ತವಾಗಿತ್ತು‌. ನಂತರ ಹರಿಯಾಣದ ಚುನಾವಣೆ ಮೇಲೆ ಈ ಹೇಳಿಕೆ ಪ್ರಭಾವ ಬೀರುವುದರಿಂದ ಕಂಗಾನ ಹೇಳಿಕೆಗೂ ಬಿಜೆಪಿ ಪಕ್ಷಕ್ಕೂ ಸಂಬಂದವಿಲ್ಲ ಎಂದು ದೂರ ಉಳಿದಿತ್ತು.

ನನ್ನ ಈ ಅಭಿಪ್ರಾಯದಿಂದ ಹಲವರು ಬೇಸರ ಮತ್ತು ನಿರಾಶೆಗೆ ಒಳಗಾಗಿದ್ದಾರೆ. ಕೃಷಿ ಕಾಯ್ದೆಯ ಪ್ರಸ್ತಾವನೆ ಬಂದಿದ್ದಾಗ ನಾವೆಲ್ಲರೂ ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದೆವು. ಆದರೆ ಸಂವೇದನಾಶೀಲತೆ ಮತ್ತು ಸಹಾನುಭೂತಿಯಿಂದ ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರು. ಮೋದಿ ಅವರ ನಿರ್ಣಯವನ್ನು ಗೌರವಿಸುವುದು, ಪಾಲಿಸುವುದು ಎಲ್ಲ ಕಾರ್ಯಕರ್ತರ ಕರ್ತವ್ಯವಾಗಿದೆ. ನಾನು ಕೇವಲ ನಟಿಯಲ್ಲ ಬಿಜೆಪಿಯ ಕಾರ್ಯಕರ್ತೆಯೂ ಹೌದು, ನನ್ನ ಅಭಿಪ್ರಾಯ ನನ್ನದು ಮಾತ್ರವಲ್ಲ ಅದು ಪಕ್ಷದ ನಿಲುವು ಆಗಿರುತ್ತವೆ ಎಂಬುದನ್ನು ನಾನೂ ಸಹ ಮರೆಯಬಾರದು. ಹಾಗಾಗಿ ನನ್ನ ಮಾತಿನಿಂದ, ಅಭಿಪ್ರಾಯದಿಂದ ಯಾರಿಗಾದರೂ ನಿರಾಸೆಯಾಗಿದ್ದರೆ ಆ ಬಗ್ಗೆ ನನಗೆ ಖೇದವಿದೆ’ ಎಂದಿದ್ದಾರೆ.

More articles

Latest article