Sunday, September 8, 2024

ರೈತರ ಪ್ರತಿಭಟನೆ ಸಂಬಂಧಿಸಿದ ಅಕೌಂಟ್, ಪೋಸ್ಟ್‌‌ಗಳಿಗೆ X ನಿರ್ಬಂಧ

Most read

ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದ ಖಾತೆಗಳು ಮತ್ತು ಪೋಸ್ಟ್‌ಗಳನ್ನು ತೆಗೆದುಹಾಕುವುದಾಗಿ ಸಾಮಾಜಿಕ ಮಾಧ್ಯಮದ ಪ್ರಮುಖ X ವೇದಿಕೆ ಒಪ್ಪಿಕೊಂಡಿದೆ.

ರೈತ ಪ್ರತಿಭಟನೆ ಸಂಬಂಧಿಸಿದ ಪೋಸ್ಟ್ ಮತ್ತು ಅಕೌಂಟ್‌ಗಳನ್ನು X ವೇದಿಕೆಯಿಂದ ಸಂಪೂರ್ಣ ಅಳಿಸುವಂತೆ ಮೋದಿ ಸರ್ಕಾರ ಆದೇಶಿಸಿದ ನಂತರ X ಇದಕ್ಕೆ ಒಪ್ಪಿಗೆ ಸೂಚಿಸಿ ಎಲ್ಲಾ ಪೋಸ್ಟ್ ಹಾಗೂ ಅಕೌಂಟ್‌ಗಳನ್ನು ನಿರ್ಬಂಧಿಸಿದೆ.

ಮೋದಿ ಸರ್ಕಾರ ಆದೇಶವನ್ನು ಪಾಲಿಸದಿದ್ದರೆ ಜೈಲು ಶಿಕ್ಷ ಸೇರಿದಂತೆ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. ಆದರೆ X ಈ ಕ್ರಮವನ್ನು ಒಪ್ಪುವಿದಿಲ್ಲ ಎಙದು ಹೇಳುತ್ತಾ. ರೈತರ ಸಂಬಂಧಿಸಿದ ಎಲ್ಲಾ ಪೋಸ್ಟ್ ಮತ್ತು ಅಕೌಂಟ್‌ಗಳನ್ನು ನಿರ್ಬಂಧಿಸಿರುವುದನ್ನು ಸ್ಪಷ್ಟಪಡಿಸಿದೆ‌.

ಈ ಕುರಿತು ಅನೇಕ ಪತ್ರಕರ್ತರು , ರೈತ ಮುಖಂಡರಿಂದ ಕಿಡಿ:-

X ಬಳಕೆದಾರ ಮತ್ತು ಭಾರತೀಯ ಪತ್ರಕರ್ತ ಮೊಹಮ್ಮದ್ ಜುಬೇರ್ ಸೋಮವಾರ ಈ ಕುರಿತು ಬರೆದಿದ್ದು, ಭಾರತದಲ್ಲಿ ರೈತರ ಪ್ರತಿಭಟನೆಯನ್ನು ವರದಿ ಮಾಡುವ ವರದಿಗಾರರು, ಪ್ರಭಾವಿಗಳು ಮತ್ತು ಪ್ರಮುಖ ರೈತ ಒಕ್ಕೂಟಗಳು, ರೈತ ಮುಖಂಡರ X ಖಾತೆಗಳನ್ನು” “ಅಮಾನತುಗೊಳಿಸಲಾಗಿದೆ”‌ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತರಾದ ಮಂದೀಪ್ ಪುನಿಯಾ ಅವರು ಬಿಬಿಸಿ ಜೊತೆ ಮಾತನಾಡಿ, ತಮ್ಮ ಮತ್ತು ಅವರ ಸುದ್ದಿ ವೇದಿಕೆಯಾದ ಗಾವ್ ಸವೇರಾ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.

“ನಾವು ಗ್ರಾಮೀಣ ಭಾರತವನ್ನು ಒಳಗೊಂಡ ವೃತ್ತಿಪರ ಪತ್ರಕರ್ತರು. ನಾವು ತಳಮಟ್ಟದಿಂದ ವರದಿ ಮಾಡುತ್ತಿದ್ದೇವೆ ಆದರೆ ಸರ್ಕಾರವು ಅದನ್ನು ಬಯಸುವುದಿಲ್ಲ. ಸರ್ಕಾರ ನಮ್ಮ ಧ್ವನಿಯನ್ನು ಅಡಗಿಸುತ್ತಿದೆ, ಇದರಿಂದ ನಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದರು.

X ತನ್ನ ಸ್ಪಷ್ಟೀಕರಣದಲ್ಲಿ, “ಆದೇಶಗಳಿಗೆ ಅನುಸಾರವಾಗಿ” ಭಾರತದಲ್ಲಿ ಮಾತ್ರ ಖಾತೆಗಳು ಮತ್ತು ಪೋಸ್ಟ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಹೇಳಿದೆ.

ಆದಾಗ್ಯೂ, ವೇದಿಕೆಯು ಸರ್ಕಾರದ ಕ್ರಮವನ್ನು ಒಪ್ಪುವುದಿಲ್ಲ ಮತ್ತು “ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇದಕ್ಕೂ ವಿಸ್ತರಿಸಬೇಕು. ಭಾರತ ಸರ್ಕಾರ ಯಾವ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ನಿರ್ದಿಷ್ಟಪಡಿಸದೆ, ಸರ್ಕಾರದ “ನಿರ್ಬಂಧಿಸುವ ಆದೇಶಗಳನ್ನು” ಕಾನೂನುಬದ್ಧವಾಗಿ ಪ್ರಶ್ನಿಸಲಿದೆ ಎಂದು X ವೇದಿಕೆ ಹೇಳಿದೆ.

More articles

Latest article