Thursday, May 23, 2024

ಮಹಾಪಂಚಾಯತ್‌ನಿಂದ ಕರಾಳ ದಿನ ಆಚರಣೆ : ಬೃಹತ್ ಪ್ರತಿಭಟನೆಗೆ ರೈತರ ಸಿದ್ಧತೆ : ಟಿಕಾಯತ್ ಹೇಳಿದ್ದೇನು?

Most read

ದೇಶದಲ್ಲಿ ಮತ್ತೆ ರೈತ ಪ್ರತಿಭಟನೆ ಶುರುವಾಗಿದೆ. ದೆಹಲಿ ಒಳಗೆ ಬರದಂತೆ ತಡೆದಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ರೈತರ ಬೇಡಿಕೆಯನ್ನು ಈಡೇರಿಸಿಕೊಳ್ಳಲು ರೈತ ಸಂಘಟನೆಗಳ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತೆ ಫುಲ್ ಆಕ್ಟೀವ್ ಆಗಿದೆ. ಗುರುವಾರ ಮಾರ್ಚ್ 14 ರಂದು ದೆಹಲಿಯಲ್ಲಿ ‘ಮಹಾಪಂಚಾಯತ್’ ಸೇರಿದ್ದು, ಸರಣಿ ಬೃಹತ್ ಪ್ರತಿಭಟನೆಗಳನ್ನು ಮಾಡುವುದಾಗಿ ಘೋಷಿಸಿದೆ.

ಈ ಕುರಿತು ರೈತ ಮುಖಂಡ ರಾಕೇಶ್ ಟಿಕಾಯತ್ ಮಾತನಾಡಿ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನಿಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಫೆಬ್ರವರಿ 26 ರಂದು ದೇಶದ ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆಗಳನ್ನು ಆಯೋಜಿಸಲಿದೆ ಎಂದು ಘೋಷಿಸಿದರು.

“”ಎಲ್ಲ ಹೆದ್ದಾರಿಗಳ ಒಂದು ಬದಿಯನ್ನು ಮಾತ್ರ ಪ್ರಯಾಣಿಕರು ಬಳಸಲು ಕೇಳಿಕೊಳ್ಳುತ್ತೇವೆ. ನಾವು ಮತ್ತೊಂದು ಬದಿಯಲ್ಲಿ ಮಾತ್ರ ಟ್ರಾಕ್ಟರ್‌ ರ್ಯಾಲಿ ಮಾಡಲಿದ್ದೇವೆ” ಎಂದು ಹೇಳಿದ್ದಾರೆ.

ಖಾನೌರಿ ಗಡಿಯಲ್ಲಿ ರೈತನ ಸಾವಾಗಿದ್ದು, ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ಮಾಡುವಂತೆ ಒತ್ತಾಯಿಸಿ ಎಸ್‌ಕೆಎಂ ಶುಕ್ರವಾರ ‘ಕರಾಳ ದಿನ’ ಅಥವಾ ‘ಆಕ್ರೋಶ್ ದಿವಸ್’ ಆಚರಿಸಲಿದೆ ಎಂದು ಹೇಳಿದರು.

ನಾಳೆಯಿಂದ ನಾವು ಅಖಿಲ ಭಾರತ ಬೃಹತ್ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದ್ದೇವೆ. ಮೊದಲ ಕಾರ್ಯಕ್ರಮ ಫೆಬ್ರವರಿ 23 ರಂದು ಕರಾಳ ದಿನ ಅಥವಾ ಆಕ್ರೋಶ್ ದಿವಸ್ ನಂತರ. ಫೆಬ್ರವರಿ 26 ರಂದು ದೇಶಾದ್ಯಂತ ‘ಟ್ರಾಕ್ಟರ್ ರ್ಯಾಲಿ’ ನಡೆಯಲಿದೆ. ಮಾರ್ಚ್ 14 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಖಿಲ ಭಾರತ ಕಿಸಾನ್ ಮಜ್ದೂರ್ ಮಹಾಪಂಚಾಯತ್ ಆಯೋಜಿಸಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಅಲ್ಲಿ ನಾವು ಸರ್ಕಾರವನ್ನು WTO ತೊರೆಯುವಂತೆ ಕೇಳುತ್ತೇವೆ ಎಂದು ರಾಕೇಶ್ ಟಿಕೈಟ್ ಹೇಳಿದರು.

“ಇವು ಸುದೀರ್ಘ ಹೋರಾಟಗಳು. ಒಂದು ಮೋರ್ಚಾದಿಂದ ಆಗುವ ಕೆಲಸವಲ್ಲ, ನಾವು ಮೊದಲಿನಂತೆ ಎಲ್ಲಾ ನಾಲ್ಕು ದಿಕ್ಕುಗಳಿಂದ ದೆಹಲಿಯನ್ನು ‘ಘೇರಾವ್’ ಹಾಕಬೇಕು (ಸುತ್ತುವರಿಯಬೇಕಾಗಿದೆ). ಎಲ್ಲ ರೈತರು ಒಗ್ಗಟ್ಟಾಗಿ ಇರಬೇಕು,” ಎಂದು ಕೇಳಿಕೊಂಡಿದ್ದಾರೆ.

ಹರ್ಯಾಣ ಸಿಎಂ ಮತ್ತು ಗೃಹ ಸಚಿವರ ವಿರುದ್ಧ ಸೆಕ್ಷನ್ 320 (ಐಪಿಸಿ) ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಮತ್ತು ಪ್ರತಿಭಟನಾಕಾರರ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು” ಎಂದು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

More articles

Latest article