ಮಾರುಕಟ್ಟೆಯಲ್ಲಿ ದರ ಕುಸಿತ; ಕೊತ್ತಂಬರಿ ಬೆಳೆದ ರೈತರಲ್ಲಿ ಆತಂಕ

ಕೋಲಾರ : ಮಾರುಕಟ್ಟೆಯಲ್ಲಿ ದರ ಕುಸಿದ ಪರಿಣಾಮ ಕೊತ್ತಂಬರಿ ಬೆಳೆದಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತರು ಕೊತ್ತಂಬರಿ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಒಂದು ಕಟ್ಟು ಕೊತ್ತಂಬರಿ ಸೊಪ್ಪು 2 ರಿಂದ 30ರುಪಾಯಿಗೆ ಮಾರಾಟವಾಗುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ ಕೊತ್ತಂಬರಿ ಬೆಳೆಯಲು ಸುಮಾರು, 25 ಸಾವಿರ ಖರ್ಚಾಗುತ್ತದೆ. ಒಂದು ಕಟ್ಟು ಕೊತ್ತಂಬರಿಗೆ ಕನಿಷ್ಠ 10 ರುಪಾಯಿ ಸಿಕ್ಕರೆ ಅಲ್ಪಸ್ವಲ್ಪ ಆದಾಯ ಸಿಗುತ್ತಿತ್ತು ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಗುಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ರೈತರು ಕೊತ್ತಂಬರಿ ಬೆಳೆದಿದ್ದು, ಬೆಲೆ ಇಲ್ಲದ ಕಾರಣ ಬೆಳೆಯನ್ನು ಕಟಾವು ಮಾಡದೆ ದನಕರುಗಳನ್ನು ಮೇಯಲು ಬಿಟ್ಟಿದ್ದಾರೆ.

More articles

Latest article

Most read