ಅವಧಿ ಮುಗಿದ ಈ ಔಷದಿಗಳನ್ನು ಫ್ಲಷ್ ಮಾಡಿ: ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ ಸಲಹೆ

Most read

ಹೊಸದಿಲ್ಲಿ : ಸಾಕುಪ್ರಾಣಿಗಳು ಹಾಗೂ ಸಾರ್ವಜನಿಕರಿಗೆ ಹಾನಿಯಾಗುವುದನ್ನು ತಪ್ಪಿಸಲು ಅವಧಿ ಮುಗಿದ ಅಥವಾ ಬಳಕೆ ಮಾಡದ 17 ಔಷಧಿಗಳನ್ನು ಕಸದ ಬುಟ್ಟಿಗೆ ಎಸೆಯುವುದಕ್ಕೆ ಬದಲಾಗಿ ಕಮೋಡ್‌ ಗೆ ಹಾಕಿ ಫ್ಲಷ್‌ ಮಾಡಬೇಕು ಎಂದು ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ ಸಲಹೆ ನೀಡಿದೆ. ಈ ಸಂಬಂಧ ರಾಜ್ಯ ಔಷಧ ನಿಯಂತ್ರಣ ವಿಭಾಗ, ಔಷಧ ಒಕ್ಕೂಟಗಳಿಗೆ ಸೂಚನೆ ನೀಡಿದೆ.

ಟ್ರಮಡಾಲ್, ಟ್ಯಾಪೆಂಟಡಾಲ್, ಡಯಾಜೆಪಮ್, ಆಕ್ಸಿಕೋಡೋನ್ ಮತ್ತು ಫೆಂಟಾನೈಲ್‌ ನಂತಹ ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಬಾರದು. ಓಂದು ವೇಳೆ ತೆಗೆದುಕೊಂಡರೆ ಪ್ರಣಾಪಾಯ ಸಂಭವಿಸಬಹುದು ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ. ಸಾಮಾನ್ಯವಾಗಿ ಈ ಔಷಧಗಳನ್ನು ಹೆಚ್ಚಾಗಿ ನೋವು ನಿವಾರಣೆಗೆ, ಒತ್ತಡ ನಿವಾರಣೆಗೆ ಅಥವಾ ಇನ್ನಿತರ ಪರಿಸ್ಥಿತಿಗಳಲ್ಲಿ ಬಳಸಲಾಗುತ್ತದೆ.

ಅವಧಿ ಮುಗಿದ ಹಾಗೂ ಬಳಸದ ಔಷಧಗಳನ್ನು ಸುರಕ್ಷಿತ ರೀತಿಯಲ್ಲಿ ಹಾಗೂ ಸರಿಯಾಗಿ ವಿಲೇವಾರಿ ಮಾಡುವುದು ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರ ಆರೋಗ್ಯದ ನಿಟ್ಟಿನಲ್ಲಿ ಮಹತ್ವದ್ದಾಗಿದ್ದು, ಈ ಕುರಿತು ಮಾರ್ಗದರ್ಶಿಗಳನ್ನು ಬಿಡುಗಡೆಗೊಳಿಸಿದೆ.

ಅವಧಿ ಮುಗಿದ ಔಷಧಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ, ಮನುಷ್ಯರು, ಪ್ರಾಣಿ ಹಾಗೂ ಪರಿಸರದ ಮೇಲೆ ಹಾನಿ ಉಂಟಾಗಲಿದೆ. ನೀರನ್ನೂ ಕಲುಷಿತಗೊಳಿಸುವ ಸಾಧ್ಯತೆಯಿದ್ದು, ವನ್ಯಜೀವಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜಾಡಮಾಲಿಗಳು ಅಥವಾ ಮಕ್ಕಳ ಕೈಗೆ ಸಿಕ್ಕಿದರೆ ಅಪಾಯದ ಸಾಧ್ಯತೆಗಳಿರುತ್ತವೆ. ಅವುಗಳನ್ನು ಪ್ರತ್ಯೇಕಿಸುವಾಗ  ಮತ್ತೆ ಮಾರುಕಟ್ಟೆ ಪ್ರವೇಶಿಸಿ ಮರು ಮಾರಾಟವಾಗುವ ಸಾಧ್ಯತೆಗಳಿರುತ್ತವೆ ಎಂದು ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

More articles

Latest article