ನವದೆಹಲಿ: ನಕಲಿ ಪ್ರಮಾಣಪತ್ರ ಬಳಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಆರೋಪ ಎದುರಿಸುತ್ತಿರುವ ಮಾಜಿ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಗೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಸತೀಶ ಚಂದ್ರ ಅವರ ದ್ವಿಸದಸ್ಯ ಪೀಠ, ತನಿಖೆಗೆ ಸಹಕರಿಸುವಂತೆ ಖೇಡ್ಕರ್ ಅವರಿಗೆ ಸೂಚನೆ ನೀಡಿದೆ.
ಖೇಡ್ಕರ್ ಮಾಡಿರುವ ಅಪರಾಧವಾದೂ ಏನು? ಭಯೋತ್ಪಾದಕಿಯೇ, ಡ್ರಗ್ಸ್ ಮಾರಾಟ ಮಾಡಿದ್ದಾರೆಯೇ? ಅಥವಾ ಕೊಲೆಗಾರ್ತಿಯೇ ಎಂದು ಪ್ರಶ್ನಿಸಿರುವ ಕೋರ್ಟ್ ನೀವು ತನಿಖೆ ನಡೆಸಿ. ಎಲ್ಲವನ್ನು ಕಳೆದುಕೊಂಡಿರುವ ಆಕೆಗೆ ಎಲ್ಲಿಯೂ ಕೆಲಸ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಖೇಡ್ಕರ್ ಯುಪಿಎಸ್ ಸಿ ಮತ್ತು ಜನರನ್ನು ವಂಚಿಸಿದ್ದಾಳೆ ಎಂದು ದೆಹಲಿ ಪೊಲೀಸರು ಮತ್ತು ಯುಪಿಎಸ್ ಸಿ ಆಕ್ಷೇಪ ವ್ಯಕ್ತಪಡಿಸಿವೆ.. 2023ರ ಬ್ಯಾಚ್ ನ ಐಎಎಸ್ ಪ್ರೊಬೇಷನರಿ ಅಧಿಕಾರಿಯಾಗಿದ್ದ ಪೂಜಾ ಒಬಿಸಿ ಕೋಟಾ ಮತ್ತು ಅಂಗವಿಕಲರ ಕೋಟಾವನ್ನು ಬಳಸಿಕೊಂಡು ಆಯ್ಕೆಯಾಗಿರುವ ಆರೋಪ ಎದುರಿಸುತ್ತಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಆಕೆಯ ವಿರುದ್ದ ದೆಹಲಿ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಜುಲೈ 31 ರಂದು ಆಕೆಯ ನೇಮಕಾತಿ ಆದೇಶವನ್ನು ಯುಪಿಎಸ್ ಸಿ ರದ್ದುಗೊಳಿಸಿತ್ತು. ಜತೆಗೆ ಭವಿಷ್ಯದ ಎಲ್ಲ ಪರೀಕ್ಷೆಗಳು ಮತ್ತು ಆಯ್ಕೆಗಳಿಂದ ಡಿಬಾರ್ ಮಾಡಲಾಗಿದೆ.