Saturday, July 27, 2024

ನೊಬೆಲ್ ಶಾಂತಿ ಪ್ರಶಸ್ತಿಗೆ ಎಲಾನ್ ಮಸ್ಕ್ ಹೆಸರು ನಾಮನಿರ್ದೇಶನ

Most read

ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಹೆಸರು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ಇದಕ್ಕೆ ಕಾರಣವೇನು ಅಂದ್ರೆ, ಉಕ್ರೇನ್ ಮತ್ತು ರಷ್ಯಾ ವಾರ್ ನಡೆಯುವಾಗ, ಎಲಾನ್ ಮಸ್ಕ್ ಉಕ್ರೇನ್‌ಗೆ ಸ್ಟಾರ್ ಲಿಂಕ್ ಮೂಲಕ ಇಂಟರ್ನೆಟ್ ಸೇವೆ ನೀಡಿದ್ದರು. ಹೀಗಾಗಿ ನಾರ್ವೆಯ ಸಂಸದರು ಎಲಾನ್ ಮಸ್ಕ್ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ.

ಸಂಕಷ್ಟದಲ್ಲಿದ್ದ ಉಕ್ರೇನ್‌ಗೆ ಇಂಟರ್‌ನೆಟ್ ಸೇವೆ ಒದಗಿಸಿ, ಎಲಾನ್ ಮಸ್ಕ್ ಮಾನವೀಯತೆ ಮೆರೆದಿದ್ದರು. ಉಕ್ರೇನ್ ಜನರು, ಸೈನಿಕರೆಲ್ಲರೂ ಈ ಸೇವೆಯ ಮೂಲಕವೇ, ಎಲ್ಲ ಮಾಹಿತಿಗಳನ್ನು ಕಲೆ ಹಾಕುತ್ತಿದ್ದರು. ತಮ್ಮ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಸಂಸದರು ಹೇಳಿದ್ದಾರೆ.

ಇನ್ನು ಮುಂದಿನ ತಿಂಗಳು ಮಾರ್ಚ್‌ಲ್ಲಿ ನಾಮನಿರ್ದೇಶನವಾದವರ ಹೆಸರುಗಳನ್ನು ಆಯ್ಕೆ ಮಾಡಲಾಗುತ್ತದೆ. ಹಲವು ಸುತ್ತಿನ ಆಯ್ಕೆ ಪ್ರಕ್ರಿಯೆ ಬಳಿಕ, ಫೈನಲ್ ಆಗಿ ಕೆಲವು ಮಹನೀಯರನ್ನು ಆಯ್ಕೆ ಮಾಡಿ, ಅಕ್ಟೋಬರ್‌ನಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

More articles

Latest article