Friday, December 6, 2024

ಅಯೋಧ್ಯೆಯ ರಾಮ ಮಂದಿರದ ರಕ್ಷಣೆಗೆ ಎಲೈಟ್ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ (ATS) ಮೊರೆ!

Most read

ಜನವರಿ 22 ರಂದು ನಡೆಯಲಿರುವ ಐತಿಹಾಸಿಕ ರಾಮ ಮಂದಿರ ಶಂಕುಸ್ಥಾಪನೆ ಸಮಾರಂಭಕ್ಕೆ ಅಯೋಧ್ಯೆ ಸಜ್ಜಾಗಿದೆ. ‘ಪ್ರಾಣ ಪ್ರತಿಷ್ಠಾ’ (Pran Pratishtha) ಸಮಾರಂಭಕ್ಕೆ ಮುಂಚಿತವಾಗಿ, ಬಿಗಿ ಭದ್ರತಾ ವ್ಯವಸ್ಥೆಗಳ ಸಿದ್ಧತೆಗಳನ್ನು ಮಾಡಲಾಗಿದೆ.  ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಅಯೋಧ್ಯೆಯಲ್ಲಿ ಎಲೈಟ್ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ (ATS) ಕಮಾಂಡೋಗಳನ್ನು (Elite Anti-Terrorist Squad) ನಿಯೋಜಿಸಲಾಗಿದೆ.

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಲು ಜನವರಿ 16 ರಂದು ಅಯೋಧ್ಯೆಯಲ್ಲಿ ಎಲೈಟ್ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ (ATS) ಕಮಾಂಡೋಗಳನ್ನು ನಿಯೋಜಿಸಿದೆ. ಯುಪಿ ಪೊಲೀಸರು 360 ಡಿಗ್ರಿ ಭದ್ರತೆಯನ್ನು ಒದಗಿಸಲು ಕೃತಕ ಬುದ್ಧಿಮತ್ತೆ ಆಧಾರಿತ ಆಂಟಿ-ಮೈನ್ ಡ್ರೋನ್‌ಗಳನ್ನು ಪರಿಚಯಿಸಿದ್ದಾರೆ.  ಅಯೋಧ್ಯೆಯು ಸಂಪೂರ್ಣ ಡ್ರೋನ್‌ಗಳ ಕಣ್ಗಾವಲಿನಲ್ಲಿರುತ್ತದೆ.

 ಅಯೋಧ್ಯಾ ಶ್ರೀರಾಮ ಮಂದಿರದ (Ram Temple in Ayodhya) ಉದ್ಘಾಟನೆ ಹಾಗೂ ರಾಮ ಮಂದಿರ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ವಿದ್ಯುಕ್ತವಾಗಿ ಆರಂಭವಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದ ಮೊದಲು 11 ದಿನಗಳ ಧಾರ್ಮಿಕ ವಿಧಿವಿಧಾನಗಳನ್ನು ಪ್ರಾರಂಭಿಸಿದರು.

ಜನವರಿ 22 ರಂದು ರಾಮ ಮಂದಿರ ಉದ್ಘಾಟನೆ ದಿನ ಒಟ್ಟು 7 ಸಾವಿರ ಮಂದಿಗೆ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಆಹ್ವಾನ ನೀಡಿದೆ. 

More articles

Latest article