Sunday, September 8, 2024

ಕರ್ನಾಟಕದಲ್ಲಿ ಆನೆಗಳ ಸಾವು ಹೆಚ್ಚಳ : 3 ವರ್ಷದಲ್ಲಿ 283 ಆನೆ ಸಾವು

Most read

ದೇಶದಲ್ಲೇ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕದಲ್ಲಿ ಆಸೆಗಳ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದೆ ಎಂಬ ಆತಂಕಕಾರಿ ವಿಷಯ ಗಣತಿಯಲ್ಲಿ ತಿಳಿದುಬಂದಿದೆ. ಕಳೆದ ಮೂರು ವರ್ಷಗಳಲ್ಲಿ 283 ಆನೆಗಳು ಸಾವನ್ನಪ್ಪಿವೆಈ ವರ್ಷದ ಏಪ್ರಿಲ್‌ನಿಂದ ಈವರೆಗೆ 35 ಆನೆಗಳು ಸಾವಿಗೀಡಾಗಿರುವ ಕುರಿತು ವರದಿಯಾಗಿದೆ.

ಕಳೆದ ವರ್ಷದ ಗಣತಿಯಂತೆ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ 6,395 ಆನೆಗಳಿದ್ದವು. ಅದರಂತೆ 2021-23ರಿಂದ 2024-25ರ ಜುಲೈವರೆಗೆ 285 ಆನೆಗಳು ಸಾವನ್ನಪ್ಪಿವೆ. ಈ ಮೂರು ವರ್ಷಗಳ ಪೈಕಿ 2023-24ರಲ್ಲಿಯೇ ಅತಿಹೆಚ್ಚು 94 ಆನೆಗಳು ಮೃತಪಟ್ಟಿರುವ ಕುರಿತು ವರದಿಯಾಗಿದೆ.

ಅಲ್ಲದೆ, ಬಹುತೇಕ ಆನೆಗಳು ನೈಸರ್ಗಿಕವಾಗಿ ಅಂದರೆ ವಯೋಸಹಜವಾಗಿ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಿದೆ. ಉಳಿದಂತೆ ಎಲೆಕ್ಟ್ರಿಕ್‌ ಶಾಕ್‌ ಸೇರಿದಂತೆ ಇನ್ನಿತರ ಅನೈಸರ್ಗಿಕವಾಗಿ 30ಕ್ಕೂ ಹೆಚ್ಚಿನ ಆನೆಗಳು ಸಾವಿಗೀಡಾಗಿವೆ. ಹಾಗೆಯೇ, 6 ಆನೆಗಳು ಬೇಟೆಗೆ ಬಲಿಯಾಗಿದ್ದು, ಈ ಕುರಿತು ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.

ಚಾಮರಾಜನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿಯೇ 17 ಆನೆಗಳು ಸಾವಿಗೀಡಾಗಿವೆ. ಕೊಡಗಿನಲ್ಲಿ 11, ಚಿಕ್ಕಮಗಳೂರು, ಮೈಸೂರು ವಲಯದಲ್ಲಿ ತಲಾ 2, ಕೆನರಾ, ಮಂಗಳೂರು ಮತ್ತು ಬೆಂಗಳೂರು ಅರಣ್ಯ ವಲಯ ವ್ತಾಪ್ತಿಯಲ್ಲಿ ತಲಾ 1 ಆನೆಗಳು ಮೃತಪಟ್ಟಿವೆ.

2021-2282 ಆನೆ ಸಾವು
2022-2372 ಆನೆ ಸಾವು
2023-2494 ಆನೆ ಸಾವು
2024-2535  ಆನೆ ಸಾವು
ಒಟ್ಟು283 ಆನೆ ಸಾವು

More articles

Latest article