2024ರ ಲೋಕಸಭಾ ಚುನಾವಣೆಯ ದಿನಾಂಕವನ್ನು ಘೋಷಿಸುವ ಮುನ್ನವೇ, ಭಾರತದ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಭಾರತದ ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.
ಮುಂದಿನವಾರ ಚುನಾವಣೆ ದಿನಾಂಕ ಘೋಷಣೆ ಆಗುವ ಸಾಧ್ಯತೆಗಳಿದೆ. ಇದರ ನಡುವೆಯೇ ಅರುಣ್ ಗೋಯಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮೂವರ ಸದಸ್ಯರ ಚುನಾವಣೆ ಆಯೋಗದಲ್ಲಿ ಒರ್ವ ಆಯುಕ್ತ ಅನುಪ್ ಚಂದ್ರ ಪಾಂಡೆ ಕಳೆದ ತಿಂಗಳು ನಿವೃತ್ತಿಯಾಗಿದ್ದಾರೆ. ಅವರ ಸ್ಥಾನಕ್ಕೆ ಇನ್ನೂ ಯಾರನ್ನು ನೇಮಕ ಮಾಡಿಲ್ಲ. ಈಗ ಅರುಣ್ ಗೋಯಾಲ್ ರಾಜಿನಾಮೆ ನೀಡಿದ್ದಾರೆ. ಸದ್ಯ ಈಗ ರಾಜೀವ್ ಕುಮಾರ್ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಅವರೇ ಮುಖ್ಯ ಚುನಾವಣೆ ಅಧಿಕಾರಿಯಾಗಿದ್ದಾರೆ. ಅವರು 2025ರ ಫೆಬ್ರವರಿಯಲ್ಲಿ ನಿವೃತ್ತರಾಗಲಿದ್ದಾರೆ.
ತ್ರಿಸದಸ್ಯ ಚುನಾವಣೆ ಆಯೋಗದಲ್ಲಿ ಈಗ ಕೇವಲ ಒರ್ವ ಆಯುಕ್ತರು ಮಾತ್ರ ಉಳಿದಿದ್ದಾರೆ. ಇಬ್ಬರು ಆಯುಕ್ತರಿಲ್ಲದೇ ಕೇವಲ ಒರ್ವ ಆಯುಕ್ತರನ್ನು ಇಟ್ಟುಕೊಂಡು ಲೋಕಸಭಾ ಚುನಾವಣೆಯ ದಿನಾಂಕ ಹಾಗೂ ಚುನಾವಣೆಯನ್ನು ಎದುರಿಸಲು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಗೋಯೆಲ್ ಆವರು 1985-ಬ್ಯಾಚ್ ಐಎಎಸ್ ಅಧಿಕಾರಿ. ನವೆಂಬರ್ 18, 2022 ರಂದು ಸ್ವಯಂ ನಿವೃತ್ತಿ ಪಡೆದಿದ್ದರು. ನಿವೃತ್ತಿ ಪಡೆದ ಒಂದೇ ದಿನಕ್ಕೆ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಕಗೊಂಡರು. ಅವರ ನೇಮಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಅರುಣ್ ಆಯ್ಕೆಯ ಬಗ್ಗೆ ಸುಪ್ರೀಂ ಕೂಡ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಸದ್ಯ ಈ ಪ್ರಕರಣವು ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
ಲೋಕಸಭಾ ಚುನಾವಣೆ ಸಮೀಪ ಇರುವಂತೆಯೇ ರಾಜೀನಾಮೆ ಯಾಕೆ ಕೊಟ್ಟರು. ಈಗ ಆ ಜಾಗಕ್ಕೆ ಯಾರನ್ನು ನೇಮಿಸಬಹುದು ಎಂಬ ಹಲವು ಪ್ರಶ್ನೆಗಳು ಜನರಲ್ಲಿ ಕಾಡತೊಡಗಿದೆ.