ಲೋಕಸಭಾ ಸಮರಕ್ಕೆ ರಾಜ್ಯಗಳಿಗೆ ಭೇಟಿ : ಚುನಾವಣಾ ಆಯೋಗದಿಂದ ಪರಿಶೀಲನೆ

Most read

ಲೋಕಸಭೆ ಚುನಾವಣೆಗೆ ರಾಜ್ಯಗಳ ಸಿದ್ದತೆಯನ್ನು ಪರಿಶೀಲಿಸಲು ಚುನಾವಣಾ ಆಯೋಗ ಬರುವ ವಾರ ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಭೇಟಿ ನೀಡಲು ತೀರ್ಮಾನ ಮಾಡಿದೆ.

ಚುನಾವಣಾ ಆಯೋಗವು ಜನವರಿ 7 ಮತ್ತು 10 ರ ನಡುವೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಲೋಕಸಭೆಯ ಸಿದ್ದಯ ಬಗ್ಗೆ ಪರಿಶೀಲಿಸಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದಲ್ಲಿ, ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರನ್ನೊಳಗೊಂಡ ತಂಡ ಪರಿಶೀಲನೆ ನಡೆಸಲು ತಯಾರಿ ಮಾಡಿಕೊಂಡಿದೆ.

ರಾಜ್ಯಗಳ ಭೇಟಿಗೂ ಮುನ್ನ,ಅಂದರೇ ಜನವರಿ 6 ರಂದು ಉಪ ಚುನಾವಣಾ ಆಯುಕ್ತರು ಎರಡು ರಾಜ್ಯಗಳಲ್ಲಿ ಸಿದ್ಧತೆಗಳ ಬಗ್ಗೆ ಸಂಪೂರ್ಣ ಆಯೋಗಕ್ಕೆ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಉಪಚುನಾವಣಾ ಆಯುಕ್ತರು ಬಹುತೇಕ ಸಾಕಷ್ಟು ರಾಜ್ಯಗಳಿಗೆ ಭೇಟಿ ನೀಡಿ ಮುಂದಿನ ಚುನಾವಣೆ ಸಿದ್ಧತೆಯ ಬಗ್ಗೆ ಮೇಲ್ವಿಚಾರಣೆ ನಡೆಸಿದ್ದಾರೆ.

ಚುನಾವಣೆಗಳಿಗೆ ಮುಂಚಿತವಾಗಿ ರಾಜಕೀಯ ಪಕ್ಷಗಳು, ಆಡಳಿತ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಗಳನ್ನು ಬೇಟಿ ಮಾಡುವುದು ಮತ್ತು ಬೂತ್ ಮಟ್ಟದ ಚುನಾವಣಾ ಸಿಬ್ಬಂದಿಗಳನ್ನು ಭೇಟಿ ಮಾಡಲು ರಾಜ್ಯಗಳ ಪ್ರವಾಸವನ್ನು ಕೈಗೊಳ್ಳುವುದು ಚುನಾವಣಾ ಆಯೋಗದ ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ, ಆಯೋಗದ ಅಧಿಕಾರಿಗಳು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

2019 ರಲ್ಲಿ, ಲೋಕಸಭೆ ಚುನಾವಣೆಯನ್ನು ಮಾರ್ಚ್ 10 ರಂದು ಘೋಷಿಸಲಾಯಿತು. ಏಪ್ರಿಲ್ 11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಸಲಾಯಿತು. ಮೇ 23 ರಂದು ಮತ ಎಣಿಕೆ ಮಾಡಲಾಯಿತು.

More articles

Latest article