ಮತ ಕಳವು ಮಾಡುವ ಮೂಲಕ ಚುನಾವಣಾ ಆಯೋಗ, ಬಿಜೆಪಿ ಸಂವಿಧಾನದ ಮೇಲೆ ಪ್ರಹಾರ ನಡೆಸುತ್ತಿವೆ; ರಾಹುಲ್‌ ಗಾಂಧಿ ಆಕ್ರೋಶ

Most read

ಬೆಂಗಳೂರು: ಪ್ರಧಾನಿ ಮೋದಿ ಅಣತಿಯಂತೆ ಮತ ಕಳವು ಮಾಡುವ ಚುನಾವಣಾ ಆಯೋಗ ಸಂವಿಧಾನದ ಮೇಲೆ ಪ್ರಹಾರ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ನಗರದ ಫ್ರೀಡಂಪಾರ್ಕ್ ನಲ್ಲಿ ಕಾಂಗ್ರೆಸ್  ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಚುನಾವಣಾ ಫಲಿತಾಂಶದ ಮೇಲೆ ಸಂಶಯಗೊಂಡು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ವಿಶ್ಲೇಷಣೆ ಆರಂಭಿಸಿದೆವು. ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದ ಮಹದೇವಪುರ ಕ್ಷೇತ್ರದಲ್ಲಿ ವಿಶ್ಲೇಷಣೆ ನಡೆಸಿದಾಗ ಚುನಾವಣಾ ಆಯೋಗ ಮತ್ತು ಬಿಜೆಪಿ ಸೇರಿ ಮತಗಳ್ಳತನ ಮಾಡಿರುವುದು ಸಾಬೀತಾಗಿದೆ.

ಮಹದೇವಪುರ ಕ್ಷೇತ್ರದಲ್ಲಿ 6.5 ಲಕ್ಷ ಮತದಾರರಿದ್ದು, 1,00,250 ಮತಗಳ್ಳತನ ಆಗಿದೆ. 5 ರೀತಿಯಲ್ಲಿ ಮತಗಳ್ಳತನ ಆಗಿರುವುದು ಪತ್ತೆಯಾಗಿದೆದೆ. ಒಬ್ಬನೇ ಮತದಾರ 4 ಬೇರೆ ಬೇರೆ ಬೂತ್ ಗಳಲ್ಲಿ ಹಲವು ಬಾರಿ ಮತದಾನ ಮಾಡಿದ್ದಾನೆ. ನಕಲಿ ವಿಳಾಸ ಇರುವ ಮತದಾರರಿದ್ದಾರೆ. ಸುಮಾರು 40 ಸಾವಿರ ನಕಲಿ ವಿಳಾಸಗಳು ಪತ್ತೆಯಾಗಿವೆ. ಒಂದೇ ವಿಳಾಸದಲ್ಲಿ 1 ಬೆಡ್ ರೂಂ ಮನೆಯಲ್ಲಿ 40-50 ಮತದಾರರಿದ್ದಾರೆ.

ಫೋಟೋ ಇಲ್ಲದ 4 ಸಾವಿರ ಮತದಾರರು. ಫಾರ್ಮ್ -6 ದುರ್ಬಳಕೆ 36 ಸಾವಿರ ಜನ. ಹೊಸಮತದಾರರಿಗೆ ಫಾರ್ಮ್ -6 ಬಳಕೆ ಮಾಡಲಾಗುತ್ತದೆ. ಆದರೆ ಫಾರ್ಮ್-6 ನಲಲಿ ಇಳಿವಯಸ್ಸಿನ ಜನರ ಹೆಸರು ನೊಂದಾಯಿಸಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಉತ್ತರ ಪ್ರದೇಶದ ಲಖನೌ, ವಾರಾಣಸಿಯಲ್ಲೂ ಮತ ಕಳವಾಗಿದೆ ಎಂದು ಆರೋಪಿಸಿದರು.

ಮತದಾರರ ಪಟ್ಟಿ ಕೇಳಿದರೆ ಚು. ಆಯೋಗ ತನ್ನ ವೆಬ್ ಸೈಟ್ ಬಂದ್ ಮಾಡಿದೆ. ಆಯೋಗ ಮತದಾರರ ಪಟ್ಟಿ ಮತ್ತು  ಮತದಾನದ ವಿಡಿಯೋ ನಮಗೆ ನೀಡಬೇಕು. ಈ ದಾಖಲೆ ನೀಡಿದರೆ ಆರೋಪ ಸಾಬೀತು ಮಾಡುತ್ತೇವೆ ಎಂದು ಸವಾಲು ಹಾಕಿದರು.

More articles

Latest article