Wednesday, December 11, 2024

ಏಕನಾಥ್ ಶಿಂಧೆ ಇನ್ನೆಂದೂ ಸಿಎಂ ಆಗಲು ಅಸಾಧ್ಯ; ಸಂಜಯ್ ರಾವತ್

Most read

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಯುಗ ಮುಗಿದಿದೆ. ಏಕನಾಥ್ ಶಿಂಧೆ ಅವರನ್ನು ಬಿಜೆಪಿ ಬಳಸಿಕೊಂಡಿದೆ. ಇದೀಗ ಅವರನ್ನು ತಿರಸ್ಕರಿಸುತ್ತಿದೆ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ. ಹಾಗೆಯೇ, ಏಕನಾಥ್ ಶಿಂಧೆ ಮತ್ತೆ ಯಾವತ್ತೂ ಮುಖ್ಯಮಂತ್ರಿ ಸ್ಥಾನಕ್ಕೆ ಮರಳುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಬಿಜೆಪಿ ಏಕನಾಥ್ ಶಿಂಧೆ ಅವರನ್ನು ಬಳಸಿಕೊಂಡು ಇದೀಗ ಪಕ್ಕಕ್ಕೆ ಎಸೆದಿದೆ ಎಂದು ಆರೋಪಿಸಿದ್ದಾರೆ.

2 ವರ್ಷಗಳ ಕಾಲ ಏಕನಾಥ್ ಶಿಂಧೆ ಅವರನ್ನು ಬಳಸಿಕೊಂಡ ಬಿಜೆಪಿ ಇದೀಗ ತಿರಸ್ಕರಿಸಿದೆ. ಅವರು ಮತ್ತೆ ಈ ರಾಜ್ಯದ ಸಿಎಂ ಆಗುವುದಿಲ್ಲ. ತಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪಕ್ಷಗಳನ್ನು ದುರ್ಬಲಗೊಳಿಸಲು ಮತ್ತು ಕಿತ್ತೊಗೆಯಲು ಬಿಜೆಪಿ ತನ್ನ ರಾಜಕೀಯ ತಂತ್ರವನ್ನು ಬಳಸುತ್ತಿದೆ. ಆಡಳಿತಾರೂಢ ಮೈತ್ರಿಕೂಟವಾದ ಮಹಾಯುತಿಯಲ್ಲಿ ಬಿರುಕು ಮೂಡುವ ಸಾಧ್ಯತೆಯಿದೆ ಎಂದು ಸಂಜಯ್ ರಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇವೇಂದ್ರ ಫಡ್ನವೀಸ್ ರಾಜ್ಯದ ಸಿಎಂ ಆಗಲಿದ್ದಾರೆ. ಅವರಿಗೆ ಬಹುಮತವಿದ್ದರೂ ಬಿಜೆಪಿಗೆ 15 ದಿನಗಳ ಕಾಲ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಅಂದರೆ ಅವರ ಪಕ್ಷ ಅಥವಾ ಮಹಾಯುತಿಯಲ್ಲಿ ಏನೋ ಲೋಪವಾಗಗಿದೆ ಎಂದು ಸಂಜಯ್ ರಾವತ್ ಶಂಕೆ ವ್ಯಕ್ತಪಡಿಸಿದ್ದಾರೆ.

More articles

Latest article