ವಿಜಯನಗರ : ಲೋಕಸಭಾ ಚುನಾವಣೆಯ ಭರ್ಜರಿ ಪ್ರಚಾರ ಕಾರ್ಯ ಶುರುವಾಗಿದ್ದು, ಬಳ್ಳಾರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ತುಕರಾಂ ಬಿಜೆಪಿ ನಾಯಕರ ಇಬ್ಬಂದಿತನವನ್ನು ಗೇಲಿ ಮಾಡಿದ್ದಾರೆ.
2008 ರಿಂದ ಬಳ್ಳಾರಿ ಜಿಲ್ಲೆ ರಿಪಬ್ಲಿಕ್ ಆಫ್ ಬಳ್ಳಾರಿ ಆಗಿತ್ತು. ಎಂಟು ಜನರಲ್ಲಿ ನಾನೊಬ್ಬನೇ ಕಾಂಗ್ರೆಸ್ ಶಾಸಕ. ನಾನು ಹೊಸದಾಗಿ ಎಂಎಲ್ಎ ಆಗಿದ್ದೆ. ಆಗ ಸಂಡೂರಿನ ಜನ ನನ್ನನ್ನು ಸಿಂಹದಂತೆ ಬೆಳೆಸಿದರು. ಬಿಜೆಪಿಯವರು ಎಂಟೂ ತೋಳಗಳು ಹಂಗೆ ಸೈಡ್ ಗೆ ಸರಿದುಕೊಂಡವು ಎಂದು ಅವರು ಹೇಳಿದರು.
ಸಂಡೂರಿನ ಜನತೆ ಸತ್ಯ – ಧರ್ಮವನ್ನು ಬೆಂಬಲಿಸಿದ್ದರು. ಹೀಗಾಗಿ ಎಲ್ಲವನ್ನೂ ಧೈರ್ಯದಿಂದ ಎದುರಿಸಿದೆ ಎಂದ ಅವರು, ಸಿಲಿಂಡರ್ ಬೆಲೆ ಸಾವಿರ ಗಡಿ ದಾಟಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ತಲೆ ಮೇಲೆ ಸಿಲಿಂಡರ್ ಹೊತ್ಕೊಂಡು ರಸ್ತೆ ಮೇಲೆ ಕುಂತಿದ್ದೇ, ಕುಂತಿದ್ದರು. ಇದೆಲ್ಲ ನೆನಪಿಲ್ಲವೇ ಬಿಜೆಪಿಯವರಿಗೆ ಎಂದು ಪ್ರಶ್ನಿಸಿದರು.
ಜನರ ಭಾವನೆ ಮೇಲೆ ಆಟ ಆಡ್ತಿದ್ದಾರಲ್ಲ, ಜನರ ಮೇಲೆ ಅವರಿಗೆ ಕಳಕಳಿ ಇದೆಯಾ? ಸಂಡೂರಿನ ನೆಲ – ಜಲ ಉಳಿಸುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಕೈಮುಗಿದು ಕೇಳುತ್ತೇನೆ ಕಾಂಗ್ರೆಸ್ ಗೆಲ್ಲಿಸಿ ಎಂದು ತುಕಾರಾಂ ಮನವಿ ಮಾಡಿಕೊಂಡಿದ್ದಾರೆ.