ಮಹಿಳೆಯರಿಗೆ ಶಿಕ್ಷಣ ನೀಡಿ ಮುಖ್ಯವಾಹಿಗೆ ತರುವುದು ಮುಖ್ಯ: ಜಲಮಂಡಳಿ  ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್

Most read

ಬೆಂಗಳೂರು; ನವರಾತ್ರಿಯ ಶುಭ ಸಂದರ್ಭದಲ್ಲಿ ಮಹಿಳಾ ಶಕ್ತಿಯನ್ನು ಆರಾಧಿಸಿ ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮನೆಯ ಹಿರಿಯರು, ಕುಟುಂಬ ಸದಸ್ಯರು ಪ್ರತಿಯೊಬ್ಬರ ಬದುಕಿನಲ್ಲಿ ಪ್ರೇರಣೆಯಾಗಿದ್ದಾರೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ ಬಿ) ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಬಿಡಬ್ಲ್ಯುಎಸ್ಎಸ್ ಬಿ ನೌಕರರ ಸಂಘದಿಂದ ಜಲಮಂಡಳಿ ರಜತಭವನದಲ್ಲಿ ಆಯೋಜಿಸಿದ್ದ ವೈಭವದ “ಮಹಿಳಾ ದಸರಾ – 2025” ಉದ್ಘಾಟಿಸಿ ಮಾತನಾಡಿದ ಅವರು, ದಸರಾ ಎಂಬುದು ಶಕ್ತಿಯ ಪ್ರತೀಕವಾಗಿದೆ. ದುಷ್ಟಶಕ್ತಿಗಳ ಸಂಹಾರದ ಸಂದರ್ಭದಲ್ಲಿ ಮನೆಯಲ್ಲಿ ತಾಯಿ, ಅಜ್ಜಿ, ಹಿರಿಯರು. ಮಹಿಳೆಯರನ್ನು ಗೌರವಿಸಬೇಕು. ಮಹಿಳೆಯರನ್ನು ಓದಿಸಿ ಮುಖ್ಯವಾಹಿನಿಗೆ ಕರೆತರಬೇಕು.  ದಸರಾ ಎಂದರೆ ಮಹಿಳಾ ಶಕ್ತಿಯಾಗಿದ್ದು, ಈ ನವರಾತ್ರಿ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಎಂದರು.

ನನ್ನ ಬದುಕಿನಲ್ಲಿ ಶಕ್ತಿ ತುಂಬಿದ್ದು ಮೂವರು ಮಹಿಳೆಯರು. ನನಗೆ ಮೊದಲ ಶಕ್ತಿ ನನ್ನ ತಾಯಿ. ನಾನು ಜನ್ಮ ತಳೆಯುವ ಸಂದರ್ಭದಲ್ಲಿ ತಾಯಿಯ ಗರ್ಭಚೀಲಕ್ಕೆ ಹಾನಿಯಾಗಿತ್ತು. ನಿಮ್ಮ ಮಗು ಸತ್ತಿರಬಹುದು, ನಿಮ್ಮ ಜೀವಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ವೈದ್ಯರು ಹೇಳಿದಾಗ, ನಾನು ಸತ್ತರೂ ಪರವಾಗಿಲ್ಲ, ನನ್ನ ಮಗ ಉಳಿಯಬೇಕು ಎಂದು ಹೇಳಿ ನನ್ನನ್ನು ಉಳಿಸಿಕೊಂಡಿದ್ದು ನನ್ನ ತಾಯಿ. ಬಳಿಕ ನನ್ನ ಸಹೋದರ, ನನ್ನ ಧರ್ಮಪತ್ನಿ ಉಳಿದ ಶಕ್ತಿಗಳು ಎಂದರು.

ಕಾರ್ಯಕ್ರಮದಲ್ಲಿ ಜಲಮಂಡಳಿ ನೌಕರರ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

More articles

Latest article