ಬೆಂಗಳೂರು : IAS ಅಧಿಕಾರಿ ಜ್ಞಾನೇಂದ್ರಕುಮಾರ್ ಮನೆ ಮೇಲೆ ನಡೆದ ಇಡಿ ದಾಳಿ ಸತತ 9 ಗಂಟೆಗಳ ಬಳಿಕ ಮುಗಿದಿದೆ. ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಮನೆಗೆ ಬೀಗ ಹಾಕಿರುವುದರಿಂದ ಕೀ ಮೇಕರ್ನನ್ನು ಕರೆಯಿಸಿ ಬಾಗಿಲು ತೆಗೆಸಿ ಮೆ ಮಹಜರು ಮಾಡಿದ್ದಾರೆ.
ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಹಳೆಯ ಬಟ್ಟೆ, ಫರ್ನಿಚರ್ ಹೊರತು ಪಡಿಸಿ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಮನೆಗೆ ನೋಟಿಸ್ ಅಂಟಿಸಿ ತೆರಳಿದ್ದಾರೆ. ನಾಳೆ ಬೆಳಗ್ಗೆಯೊಳಗೆ ದಾಖಲೆಗಳೊಂದಿಗೆ ಶಾಂತಿನಗರದ ಇಡಿ ಕಚೇರಿಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

