Sunday, September 8, 2024

ಆರ್ಥಿಕ ಸಮೀಕ್ಷೆ|ವಾಸ್ತವವೇನು?‌

Most read

ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಾತನಾಡುತ್ತಾ ಮಂಡಿಸಿದ  ಆರ್ಥಿಕ ಸಮೀಕ್ಷೆಯಲ್ಲಿ 2025ರಲ್ಲಿ ಜಿಡಿಪಿ ಶೇ.6-7ರಷ್ಟಾಗುತ್ತದೆ ಎಂದು ಹೇಳಿದ್ದಾರೆ. ಆದರೆ ವಾಸ್ತವವೇನು?

ಭಾರತದ ತಲಾ ವಾರ್ಷಿಕ ಆದಾಯ (per capita income) 1.99 ಲಕ್ಷ. ಈ ಕಾರಣದಿಂದ ಜಾಗತಿಕವಾಗಿ 192 ದೇಶಗಳ ಪೈಕಿ 142 ರ್ಯಾಂಕ್. 2019ರಲ್ಲಿ ಕಾರ್ಪೋರೇಟ್ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಕಡಿತಗೊಳಿಸಿದ ಕಾರಣ ವಾರ್ಷಿಕವಾಗಿ 1.5 ಲಕ್ಷ ಕೋಟಿ, ಕಳೆದ ಐದು ವರ್ಷಗಳಲ್ಲಿ 8 ಲಕ್ಷ ಕೋಟಿ ನಷ್ಟವಾಗಿದೆ. ನಿರುದ್ಯೋಗದ ಪ್ರಮಾಣ ಶೇ.9.2ರಷ್ಟಿದೆ. ಉದ್ಯೋಗದ ಪ್ರಮಾಣ ಶೇ. 39.2ರಷ್ಟಿದೆ

2013ರಲ್ಲಿ ಕೇಂದ್ರ ಸಾರ್ವಜನಿಕ ಉದ್ಯಮದಲ್ಲಿ 17.3 ಲಕ್ಷ ಉದ್ಯೋಗಿಗಳಿದ್ದರು. 2022ರಲ್ಲಿ 14.6 ಲಕ್ಷ ಉದ್ಯೋಗಿಗಳಿದ್ದಾರೆ. ಮೋದಿಯವರ ಹತ್ತು ವರ್ಷಗಳ  ಆಡಳಿತದಲ್ಲಿ 2.7 ಲಕ್ಷ ಕೇಂದ್ರದ ಉದ್ಯೋಗ ನಷ್ಟವಾಗಿದೆ.

ಆರೋಗ್ಯಕ್ಕೆ ಜಿಡಿಪಿಯ ಶೇ.1, ಶಿಕ್ಷಣಕ್ಕೆ ಜಿಡಿಪಿಯ ಶೇ.0.45ರಷ್ಟು ಮಾತ್ರ ವೆಚ್ಚ. ಇದು ಸಾರ್ವಜನಿಕ ಆರೋಗ್ಯ, ಶಿಕ್ಷಣವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ

ನೋಟು ಅಮಾನ್ಯೀಕರಣ, ಲಾಕ್‌ಡೌನ್, ಜಿ ಎಸ್ ಟಿ ಕಾರಣದಿಂದ ಅಸಂಘಟಿತ ವಲಯದಲ್ಲಿ 11.3 ಲಕ್ಷ ಕೋಟಿ ಆರ್ಥಿಕ ನಷ್ಟವಾಗಿದೆ, 1.6 ಕೋಟಿ ಉದ್ಯೋಗ ನಷ್ಟವಾಗಿದೆ.

ಒಟ್ಟು ಜನಸಂಖ್ಯೆಯ (94 ಕೋಟಿ ಮತದಾರರು) ಕೇವಲ ಶೇ.2.2ರಷ್ಟು ಜನಸಂಖ್ಯೆ ಆದಾಯ ತೆರಿಗೆ (ನೇರ ತೆರಿಗೆ) ಪಾವತಿಸುತ್ತಿದ್ದಾರೆ. (ಅಮೇರಿಕಾದಲ್ಲಿ ಶೇ.50, ಇಂಗ್ಲೆಂಡ್ ನಲ್ಲಿ ಶೇ.59.7, ಜರ್ಮನಿಯಲ್ಲಿ ಶೇ.61.3 ಜನಸಂಖ್ಯೆ) ಅಂದರೆ 54 ಲಕ್ಷ ಕೋಟಿ (ದೇಶದ ಒಟ್ಟು ಸಂಪತ್ತಿನ ಶೇ.42, ಅಂದರೆ ಹದಿನೆಂಟು ತಿಂಗಳ ಕಾಲ ಕೇಂದ್ರ ಬಜೆಟ್ ವೆಚ್ಚ ಭರಿಸ ಬಹುದಾದಷ್ಟು) ಸಂಪತ್ತಿರುವ 100 ಅತಿ ಶ್ರೀಮಂತರು, ಶ್ರೀಮಂತರು (ಇವರ ಸಂಪತ್ತು ಉಳಿದ ಶೇ.92 ಜನಸಂಖ್ಯೆಗಿಂತ 16,700 ಪಟ್ಟು ಜಾಸ್ತಿ) ಒಳಗೊಂಡಂತೆ ಶೇ.3ರಷ್ಟು ಜನಸಂಖ್ಯೆ  10 ಲಕ್ಷ ಮೇಲ್ಪಟ್ಟು ತೆರಿಗೆ ಪಾವತಿಸಿದ್ದಾರೆ. ಉಳಿದ ಶೇ. 93ರಷ್ಟು ಜನಸಂಖ್ಯೆ 10 ಲಕ್ಷಕ್ಕಿಂತ ಕಡಿಮೆ ತೆರಿಗೆ ಪಾವತಿಸಿದ್ದಾರೆ

ಅಂದರೆ ಕ್ರೂನಿ ಬಂಡವಾಳಶಾಹಿಗಳು ಸಂಪತ್ತು ಗಳಿಸಿದ್ದಾರೆ, ತೆರಿಗೆ ಪಾವತಿಸುತ್ತಿಲ್ಲ. ಆದರೆ ಬಡವರು ಒಳಗೊಂಡಂತೆ ಕೆಳ ಮಧ್ಯಮ ವರ್ಗ, ಮಧ್ಯಮ ವರ್ಗ ಪಾವತಿಸುವ ಪರೋಕ್ಷ ತೆರಿಗೆ ಜಿಎಸ್ಟಿ ಸಂಗ್ರಹ 1.71 ಲಕ್ಷ ಕೋಟಿಯಷ್ಟಿದೆ.

ಕಳೆದ ಹತ್ತು ವರ್ಷಗಳಲ್ಲಿ ಮೂಲಭೂತ ಸೌಕರ್ಯಕ್ಕಾಗಿ 44 ಟ್ರಿಲಿಯನ್ (1 ಟ್ರಿಲಿಯನ್ ಅಂದರೆ 1 ಲಕ್ಷ ಕೋಟಿ) ವೆಚ್ಚವಾಗಿದೆ. ಆದರೆ ನಿರುದ್ಯೋಗ ಸಮಸ್ಯೆ ಉಲ್ಬಣ ಗೊಂಡಿದೆ, ಅಭಿವೃದ್ಧಿ ಹಿನ್ನಡೆಯಾಗಿದೆ, ಹಾಗಿದ್ದರೆ ಇಷ್ಟೊಂದು ಬೃಹತ್ ಮೊತ್ತ ಎಲ್ಲಿ ಹೋಯಿತು? ಯಾರ ಜೇಬು ಸೇರಿತು?

ಉದ್ಯೋಗದಲ್ಲಿ ಅನೌಪಚಾರಿಕ ವಲಯ (informal sector) ಶೇ. 89.2ರಷ್ಟಿದೆ, ಅಸಂಘಟಿತ ವಲಯ ಶೇ.92ರಷ್ಟಿದೆ..

ಇದು ಭಾರತದ ಆರ್ಥಿಕತೆಯ ನಾಡಿಮಿಡಿತ. ಇದು ಸಣ್ಣ ಉದಾಹರಣೆ ಮಾತ್ರ. ಅಗೆದಷ್ಟೂ ಅಸ್ಥಿಪಂಜರದ ಮೂಳೆಗಳು ಉದುರುತ್ತವೆ….

ಎಲ್ಲವೂ ಅರಣ್ಯರೋದನವೇ?

ಬಿ. ಶ್ರೀಪಾದ ಭಟ್

More articles

Latest article