ಸ್ಟಾರ್ಸ್ ಮಕ್ಕಳು ಒಬ್ಬೊಬ್ಬರಾಗಿಯೇ ಸಿನಿಮಾ ರಂಗಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಈಗ ದುನಿಯಾ ವಿಜಯ್ ಮಗಳ ಸರದಿ. ಕಳೆದ ಕೆಲವು ದಿನಗಳ ಹಿಂದೆಯೇ ದುನಿಯಾ ವಿಜಯ್ ಮಗಳ ಸಿನಿಮಾದ ಮುಹೂರ್ತ ಶುರುವಾಗಿತ್ತು. ಸಿನಿಮಾದ ಟೈಟಲ್ ಇನ್ನು ಅನೌನ್ಸ್ ಆಗಿರಲಿಲ್ಲ. ದುನಿಯಾ ಸೂರಿ ಕೂಡ ‘ಕಾಗೆ ಬಂಗಾರ’ ಸಿನಿಮಾ ಮಾಡುವುದಾಗಿ ಹೇಳುತ್ತಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದ್ದು, ದುನಿಯಾ ವಿಜಯ್ ಮಗಳು ರಿತನ್ಯಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಕಾಗೆ ಬಂಗಾರದ ಟೈಟಲ್ ಅನ್ನು ಒಂಭತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಕೆಂಡಸಂಪಿಗೆ ಸಿನಿಮಾ ಈಗಲೂ ಎಲ್ಲರಿಗೂ ನೆನಪು ಇದ್ದೆ ಇರುತ್ತದೆ ಹಾಡುಗಳು ಎದೆಯೊಳಗಡೆ ತಕದಿಮಿತ ಹಾಡುತ್ತವೆ. ಈ ಸಿನಿಮಾ ಸಕ್ಸಸ್ ಬೆನ್ನಲ್ಲೇ ದುನಿಯಾ ಸೂರಿ ಅವರು ಪ್ರೀಕ್ವೆಲ್ ಹಾಗೂ ಸೀಕ್ವೆಲ್ ಮಾಡುತ್ತೇನೆಂದು ಅನೌನ್ಸ್ ಮಾಡಿದ್ದರು. ಅದರ ಮುಂದುವರೆದ ಭಾಗ ಪ್ರಿಕ್ವೆಲ್ ಕಾಗೆ ಬಂಗಾರ ಹಾಗೂ ಸೀಕ್ವೆಲ್ ಬ್ಲ್ಯಾಕ್ ಮ್ಯಾಜಿಕ್ ಎಂದಿದ್ದರು. ಇದೀಗ ದುನಿಯಾ ವಿಜಿ ಮಗಳಿಗಾಗಿ ಕಾಗೆ ಬಂಗಾರ ಅನೌನ್ಸ್ ಮಾಡಿದ್ದು, ಮುಂದಿನ ತಿಂಗಳು ಅಂದ್ರೆ ಜೂನ್ ನಿಂದ ಸಿನಿಮಾ ಶುರುವಾಗಲಿದೆ.
ಜಯಣ್ಣ ಕಂಬೈನ್ಸ್ ಅಡಿಯಲ್ಲಿಯೇ ಸಿನಿಮಾ ಸೆಟ್ಟೇರಲಿದೆ. ವಿರಾಟ್ ಹೀರೋ ಆಗಿ ನಡಿಸಲಿದ್ದು, ರಿತನ್ಯಾ ವಿಜಯ್ ನಾಯಕಿಯಾಗಲಿದ್ದಾರೆ. ಸದ್ಯಕ್ಕೆ ಮುಂದಿನ ತಿಂಗಳಿನಿಂದ ಶೂಟಿಂಗ್ ಪ್ರಾರಂಭವಾಗಲಿದೆ ಎಂಬುದರ ಮಾಹಿತಿಯನ್ನಷ್ಟೇ ಜಯಣ್ಣ ಕಂಬೈನ್ಸ್ ಕೂಡ ಬಿಟ್ಟುಕೊಟ್ಟಿದೆ. ಸಿನಿಮಾದಲ್ಲಿ ಬೇರೆ ಯಾರು ನಟಿಸಿಲಿದ್ದಾರೆ, ತಂತ್ರಜ್ಞರು ಯಾರು ಎಲ್ಲಾ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಅನೌನ್ಸ್ ಮಾಡಲಿದೆ.