ಮೋದಿ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ: ಡಾ.ಯತೀಂದ್ರ ಸಿದ್ಧರಾಮಯ್ಯ ಆಕ್ರೋಶ

Most read

ಮೈಸೂರು: ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯ ಜೋರಾಗಿದೆ. ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಅಬ್ಬರದ ಸಮಾವೇಶ ಹಮ್ಮಿಕೊಂಡಿದ್ದಾರೆ. ಈ ಸಮಾವೇಶದಲ್ಲಿ ಡಾ. ಡಾ.ಯತೀಂದ್ರ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕೊಟ್ಟ ವಾಗ್ದಾನವನ್ನು ಮತ್ತೊಮ್ಮೆ ನೆನೆಪಿಸಿದ್ದಾರೆ.

ಮೋದಿ ಅಧಿಕಾರಕ್ಕೆ ಬರೋದಕ್ಕೂ ಮುನ್ನ 16 ಭರವಸೆ ಕೊಟ್ಟಿದ್ದರು. ಕಾಳ ಧನ ವಾಪಸ್ ತರುತ್ತೇವೆ ಅಂದಿದ್ದರು. ಆದರೆ ಸುಪ್ರೀಂಕೋರ್ಟ್ಗೆ ಸ್ವಿಸ್ ಬ್ಯಾಂಕ್ ಹಣದ ಮಾಹಿತಿಯನ್ನೇ ಕೊಡಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಅಂತ ಹೇಳಿದ್ದರು. ಆದ್ರೆ ದೆಹಲಿಯಲ್ಲಿ ರೈತರು ವರ್ಷಾನುಗಟ್ಟಲೆ ಪ್ರತಿಭಟನೆ ಮಾಡಬೇಕಾಯ್ತು, ಮೋದಿ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿಂದು ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿ ಕೊಟ್ಟ ವಾಗ್ದಾನಗಳನ್ನೆಲ್ಲ ನೆನಪಿಸಿ, ಇದೆಲ್ಲ ಯಾಕೆ ಈಡೇರಿಲ್ಲ ಎಂದು ಪ್ರಶ್ನಿಸಿದರು.

ವರ್ಷಕ್ಕೆ 2 ಕೋಟಿ ರೂ. ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂತ ಹೇಳಿದ್ದರು. ಈಗ ಹಿಂದೆ ಯಾವ ಸಂದರ್ಭದಲ್ಲೂ ಇಲ್ಲದಷ್ಟು ನಿರುದ್ಯೋಗ ಇದೆ. ಉದ್ಯೋಗ ಸೃಷ್ಟಿ ಬಗ್ಗೆ ಕೇಳಿದರೆ ಅಮಿತ್ ಷಾ ಅದೆಲ್ಲ ಜುಮ್ಲಾ ಅಂತಾರೆ. ಅಂದರೆ ಬಿಜೆಪಿ ನಾಯಕರೇ ಸುಳ್ಳು ಭರವಸೆ ಅಂತ ಒಪ್ಪಿಕೊಂಡಿದ್ದಾರೆ. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಮೋದಿ ಸರ್ಕಾರ ಬಂದ ಮೇಲೆ ಕೋಮಗಲಭೆ ಹೆಚ್ಚಾಗಿದೆ. ಧರ್ಮ- ಧರ್ಮಗಳ ನಡುವೆ ಗಲಭೆ ಹೆಚ್ಚಾಗಿದೆ ಎಂದು ಅವರು ಹೇಳಿದರು.

More articles

Latest article