ಪೀಪಲ್ಸ್ ಸೈಕಿಯಾಟ್ರಿಸ್ಟ್ | ಪದ್ಮಶ್ರೀ ಪ್ರಶಸ್ತಿge ಭಾಜನರಾದ ಡಾ. ಚಂದ್ರಶೇಖರ ಚನ್ನಪಟ್ಟಣ ಬಗ್ಗೆ ನಿಮಗೆಷ್ಟು ಗೊತ್ತು?

Most read

“ಪೀಪಲ್ಸ್ ಸೈಕಿಯಾಟ್ರಿಸ್ಟ್” ಎಂದೇ ಖ್ಯಾತರಾಗಿರುವ  ಡಾ. ಚಂದ್ರಶೇಖರ ಚನ್ನಪಟ್ಟಣ ರಾಜಣ್ಣಾಚಾರ್ ಅವರಿಗೆ ಮೈದ್ಯಕೀಯ ಹಾಗೂ ಜನಸೇವೆಯಲ್ಲಿ ಅಪಾರ ಜನಮನ್ನಣೆ ಪಡೆದಿದ್ದಾರೆ. ಅವರ ಈ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ, ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ- 2024  ನೀಡಿ ಗೌರವಿಸಿದೆ.

ತಮ್ಮ ವೃತ್ತಿಜೀವನ್ನು ಬೆಂಗಳೂರಿನ ನಿಮ್ಹಾನ್ಸ್‌ ನಲ್ಲಿ ಶುರು ಮಾಡಿದ್ದರು ಕೂಡ. ಬೆಂಗಳೂರಿನ ಸುತ್ತಮುತ್ತಲಿನ ಗ್ರಾಮಗಳನ್ನು ತೆರೆಳಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದರು. ನಂತರ ಗ್ರಾಮೀಣ ಭಾಗದ ಸಮುದಾಯದ ಹಿತದೃಷ್ಟಿಯಿಂದಾಗಿ ಗ್ರಾಮಗಳನ್ನು ದತ್ತು ಪಡೆದು ಮನೆಮನೆಗೆ ತೆರಳಿ ರೋಗಿಗಳಿಗೆ ಚಿಕಿತ್ಸೆ ನೀಡಿ, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.. ಮತ್ತವರ ನಿಸ್ವಾರ್ಥ ಪ್ರಯತ್ನಗಳು UNICEF, ಅನೇಕ NGOಗಳು ಮತ್ತು ಸರ್ಕಾರಿ ಏಜೆನ್ಸಿಗಳಿಗೆ ಕೂಡ ವಿಸ್ತರಣೆಗೊಂಡಿದೆ. ಅಲ್ಲಿಯೂ ಅವರು ಸಲಹೆಗಾರ ಕೆಲಸ ಮಾಡಿದ್ದಾರೆ.

ಚನ್ನಪಟ್ಟಣ ನಗರದಲ್ಲಿ ಆಭರಣ ವ್ಯಾಪಾರಿ ಬಿ.ಎಂ.ರಾಜಣ್ಣಾಚಾರ್ ದಂಪತಿಗೆ ಜನಿಸಿದ ಡಾ. ಚಂದ್ರಶೇಖರ್ ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯದಲ್ಲಿ ಪದವಿ ಪಡೆಯುವ ಮೊದಲು ತಮ್ಮ ಆರಂಭಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಪೂರ್ಣಗೊಳಿಸಿದರು.

ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರಿದ ಅವರು 1973ರಲ್ಲಿ ವೈದ್ಯಕೀಯ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. 1978ರಲ್ಲಿ ವೈದ್ಯಕೀಯದಲ್ಲಿ ಡಿಪ್ಲೊಮಾ ಮತ್ತು ಮನೋವಿಜ್ಞಾನದಲ್ಲಿ MD ಪದವು ಪಡೆದಿದ್ದಾರೆ. ತಮ್ಮ ವೃತ್ತಿಜೀವನದ ಉದ್ದಕ್ಕೂ, ಡಾ. ಚಂದ್ರಶೇಖರ್ ಅವರು ಗ್ರಾಮೀಣ ಭಾಗದ ಸಮುದಾಯದ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ.

ನಂತರ, ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿ ವೃತ್ತಿಜೀವನ್ನು ಆರಂಭಿಸಿದ ಅವರು 2013 ರಲ್ಲಿ ಅಲ್ಲಿಯೇ ನಿವೃತ್ತಯಾದರು. 2007 ರಲ್ಲಿ, ಅವರು ಸಮಾಧಾನ ಕೌನ್ಸೆಲಿಂಗ್ ಟ್ರಸ್ಟ್ ಸೆಂಟರ್ ಅನ್ನು ಸ್ಥಾಪಿಸಿ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಉಚಿತ ಸಲಹೆ ಸೇವೆಗಳನ್ನು ನೀಡುತ್ತಿದ್ದಾರೆ. ಈ ಸಂಸ್ಥೆಯು ಹಲವಾರು ವರ್ಷಗಳಿಂದ ಸಾವಿರಾರು ಜನರಿಗೆ ಸಹಾಯ ಮಾಡುತ್ತಿದೆ.

ಆರೋಗ್ಯ ವಿಷಯದಲ್ಲಿ ನಾನಾ ಗೊಂದಲಗಳನ್ನು ಎದುರಿಸುತ್ತಿರುವ ಇಂದಿನ ತಲೆಮಾರಿನವರಿಗೆ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಪ್ರಯತ್ನದಲ್ಲಿ ಡಾ. ಚಂದ್ರಶೇಖರ್ ಮತ್ತವರ ವೈದ್ಯರು ಕೆಕಲಸ ಮಾಡುತ್ತಿದ್ದಾರೆ. ಜೊತೆಗೆ ಜನಸಾಮಾನ್ಯರಲ್ಲಿ ಈ ಕುರಿತು ಅರಿವು ಮೂಡಿಸಲು ಆರೋಗ್ಯ ಕಾರ್ಯಕರ್ತರು, ಶಾಲಾ ಮತ್ತು ಕಾಲೇಜು ಶಿಕ್ಷಕರು, ಎನ್‌ಜಿಒಗಳು ಮತ್ತು ಸ್ವಯಂಸೇವಕರಿಗೆ ತರಬೇತಿ ಸಹ ನಿಡುತ್ತಿದ್ದಾರೆ.

ಭಾರತದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಡಾ. ಚಂದ್ರಶೇಖರ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಮಾನಸಿಕ ಆರೋಗ್ಯದ ಕುರಿತು ಜನರ ನಡುವೆ ಇರುವುದು, ಕ್ಲಿನಿಕಲ್ ಕೆಲಸ, ಸಲಹೆಗಾರರಾಗಿ, ಜೊತೆಗೆ, ವೈದ್ಯಕೀಯ ಸಾಹಿತ್ಯ ಲೋಕದಲ್ಲೂ ಕೂಡ ಚಂದ್ರಶೇಖರ್ ಮಹತ್ವದ ಕೊಡುಗೆ ನೀಡಿದ್ದಾರೆ.

ಕನ್ನಡದಲ್ಲಿ 280 ಕ್ಕೂ ಹೆಚ್ಚು ಪುಸ್ತಕಗಳನ್ನು ಮತ್ತು ಇಂಗ್ಲಿಷ್‌ನಲ್ಲಿ 30 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. 100 ಕ್ಕೂ ಹೆಚ್ಚು ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳ ಸಂಪಾದಕರಾಗಿದ್ದಾರೆ.

ಡಾ. ಚಂದ್ರಶೇಖರ್ ಅವರು ಅನೇಕ ವೈದ್ಯಕೀಯ ವೃತ್ತಿಪರರನ್ನು ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯವನ್ನು ಬರೆಯಲು ಪ್ರೋತ್ಸಾಹಿಸಿದ್ದಾರೆ. ಮತ್ತವರು ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಸದಸ್ಯ ಕೂಡ ಆಗಿದ್ದಾರೆ.

75 ನೇ ವಯಸ್ಸಿನ, ಡಾ. ಚಂದ್ರಶೇಖರ್ ಅವರು ಸುಮಾರು 50,000 ರೋಗಿಗಳಿಗೆ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆಯನ್ನು ನೀಡಿದ್ದು ಆ ಕಾರ್ಯವನ್ನು ಮತ್ತೆ ಮುಂದುವರಿಸಿದ್ದಾರೆ. 20,000 ಹೆಚ್ಚು ವೃತ್ತಿಪರರಿಗೆ ತರಬೇತಿ ನೀಡಿದ್ದಾರೆ. ಅವರ ಮಾನಸಿಕ ಆರೋಗ್ಯದ ಬಗ್ಗೆ ಇರುವ ಅಚಲವಾದ ಬದ್ಧತೆಗೆ ಅಸಂಖ್ಯಾತರಿಗೆ ನಿಜವಾದ ಸ್ಫೂರ್ತಿಯಾಗಿದೆ ಎಂದು ಹೇಳಿದ ತಪ್ಪಾಗಲಾರದು.

More articles

Latest article