ಕನ್ನಡ ಚಿತ್ರರಂಗದಲ್ಲಿ ಆಗಾಗ ಬಿಗ್ ಬಜೆಟ್ ಮೂವಿಗಳು ಸದ್ದು ಮಾಡುತ್ತವೆ. ಪೌರಾಣಿಕ ಕಥೆಗಳನ್ನು ಆಧರಿಸಿದ ಇಂಥ ಸಿನಿಮಾಗಳಿಗೆ ಮೂರ್ನಾಲ್ಕು ವರ್ಷ ತಮ್ಮನ್ನು ತಾವೂ ಒಂದೇ ಸಿನಿಮಾಗಾಗಿ ಮೀಸಲಿಡಬೇಕಾಗುತ್ತದೆ. ಆದರೆ ಆ ರೀತಿಯ ಸಮಯವನ್ನು ಮೀಸಲಿಡುವುದಕ್ಕೆ ಡಾರ್ಲಿಂಗ್ ಕೃಷ್ಣ ಒಪ್ಪಿರಲಿಲ್ಲ. ಇತ್ತಿಚೆಗೆ ಬಿಗ್ ಬಜೆಟ್ ಸಿನಿಮಾ ಹಲಗಲಿ ಅನೌನ್ಸ್ ಆಗಿತ್ತು. ಈ ಸಿನಿಮಾ ಒಪ್ಪಿಕೊಂಡ ಬೆನ್ನಲ್ಲೇ ಡಾರ್ಲಿಂಗ್ ಫಾದರ್ ಸಿನಿಮಾ ಮೂಹೂರ್ತ ಕೂಡ ಮುಗಿಸಿದ್ದರು. ಆದರೆ ಹಲಗಲಿ ಪೌರಾಣಿಕವಾಗಿರುವ ಕಾರಣ, ಬೇರೆ ಸಿನಿಮಾ ಮಾಡುವುದಕ್ಕೆ ನಿರ್ಮಾಪಕರು ಒಪ್ಪಿರಲಿಲ್ಲ. ಫೈನಲಿ ಆ ಸಿನಿಮಾದಿಂದ ಡಾರ್ಲಿಂಗ್ ಕೃಷ್ಣ ಹೊರ ನಡೆದಿದ್ದರು. ಇದೀಗ ಆ ದೊಡ್ಡಮಟ್ಟದ ಸಿನಿಮಾಗೆ ಡಾಲಿ ಧನಂಜಯ್ ಆಯ್ಕೆಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಹಲಗಲಿಗಾಗಿ ಕಳೆದ 6 ತಿಂಗಳಿನಿಂದ ನಾನು ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಈಗ ಫಾದರ್ ಸಿನಿಮಾ ಆಫರ್ ಬಂದಿದೆ. ಮುಂದೆ ಶಶಾಂಕ್ ಅವರ ಜೊತೆಗೆ ಮತ್ತೊಂದು ಸಿನಿಮಾದ ಮಾತುಕತೆ ನಡೆದಿದೆ. ಹಲಗಲಿ ಚಿತ್ರತಂಡ ಮೂರು ವರ್ಷಗಳ ಕಮಿಟ್ಮೆಂಟ್ ಕೇಳಿದೆ. ನಾನು ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ನಾನು ಹಲಗಲಿ ಜೊತೆಗೆ ಬೇರೆ ಸಿನಿಮಾ ಮಾಡುವ ಅವಕಾಶವಿದ್ದರೆ ಸಿನಿಮಾದಿಂದ ಹೊರ ಬರುತ್ತಿರಲಿಲ್ಲ ಎಂದು ಡಾರ್ಲಿಂಗ್ ಕೃಷ್ಣ ಸಿನಿಮಾದಿಂದ ಹೊರ ಬಂದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಿರ್ದೇಶಕ ಸುಕೇಶ್ ಡಿ.ಕೆ ಹಲಗಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೆರಿಲ್ಲಾ ವಾರ್ ಮಾಡುವ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಹಲಗಲಿ ಬೇಡರ ಕಥೆಯನ್ನು ತೆರೆಮೇಲೆ ತರುತ್ತಿದ್ದಾರೆ. ಇದೊಂದು ಐತಿಹಾಸಿಕ ಸಿನಿಮಾವಾಗಿರುವ ಕಾರಣ ಆ ಕಾಲಘಟ್ಟದ ಕಥೆಯನ್ನು ಕಟ್ಟಿಕೊಡುವ ಪ್ರಯತ್ನವಾಗುತ್ತಿದೆ. 80 ಕೋಟಿ ಬಜೆಟ್ ನಲ್ಲಿ ಸಿನಿಮಾ ರೆಡಿಯಾಗುತ್ತಿದ್ದು, ಇದಕ್ಕಾಗಿ ನಾಯಕನ ಡೆಡಿಕೇಷನ್ ಬಹಳ ಮುಖ್ಯವಾಗಿದೆ.