RCB ಪ್ಲೇ ಆಫ್ ತಲುಪುವ ಸಾಧ್ಯತೆ ಎಷ್ಟಿದೆ ಗೊತ್ತೇ?

Most read

ಬೆಂಗಳೂರು: ಈ ಬಾರಿಯ ಐಪಿಎಲ್ ಪಂದ್ಯಾವಳಿಯ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ನಾಲ್ಕು ಗೆಲುವು ಕಂಡು ಬೀಗುತ್ತಿದ್ದರೂ ಪ್ಲೇ ಆಫ್ ಕನಸು ಅಷ್ಟು ಸುಲಭವಾಗೇನೂ ಇಲ್ಲ.

ಆಡಿರುವ 12 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿರುವ RCB ಬಳಿ ಈಗ ಒಟ್ಟು ಹತ್ತು ಅಂಕಗಳಿವೆ. ತನ್ನ ಇನ್ನೆರಡು ಪಂದ್ಯಗಳನ್ನೂ ಗೆದ್ದರೆ RCB 14 ಅಂಕ ಗಳಿಸಬಹುದು. ಆದರೆ ಕೇವಲ ಇಷ್ಟರಿಂದಲೇ RCB ಪ್ಲೇ ಆಫ್ ತಲುಪಲು ಸಾಧ್ಯವಾಗುವುದಿಲ್ಲ.

RCB ತನ್ನ ಕೊನೆಯ ಪಂದ್ಯಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಬೇಕಿದೆ. ಈ ಪಂದ್ಯಗಳನ್ನು ಒಳ್ಳೆಯ ರನ್ ರೇಟ್ ನೊಂದಿಗೆ ಗೆಲ್ಲುವುದು ಮುಖ್ಯ. ಒಂದು ಪಂದ್ಯದಲ್ಲಿ ಸೋತರೂ RCB ಪ್ಲೇ ಆಫ್ ನಿಂದ ಹೊರಗೆ ಉಳಿಯುತ್ತದೆ. ಅಷ್ಟು ಮಾತ್ರವಲ್ಲ, ಪ್ಲೇ ಆಫ್ ರೇಸ್ ನಲ್ಲಿರುವ CSK, DC, LSG ತಂಡಗಳು ತಮ್ಮ ಬಾಕಿ ಪಂದ್ಯಗಳಲ್ಲಿ ಸೋತರೆ ಮಾತ್ರ RCB ಪ್ಲೇ ಆಫ್ ಕನಸು ಕೈಗೂಡಲಿದೆ. ಆದರೆ ಈ‌ ಸಾಧ್ಯತೆ ಶೇ. 8 ರಿಂದ ಶೇ 16ರಷ್ಟಿದೆ.

ಆರ್ ಸಿಬಿ ಪ್ಲೇ ಆಫ್ ತಲುಬೇಕೆಂದರೆ ಏನೆಲದಲ ಆಗಬೇಕು ಎಂಬುದನ್ನು ಒಮ್ಮೆ ಗಮನಿಸಿ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ಪಂದ್ಯದಲ್ಲಿ ಚೆನ್ನೈ ಸೋಲಬೇಕು.

ರಾಯಲ್ ಚಾಲೆಂಜರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಗೆಲ್ಲಬೇಕು.

ಗುಜರಾತ್ ಮತ್ತು ಚೆನ್ನೈ ಪಂದ್ಯದಲ್ಲಿ‌ ಚೆನ್ನೈ ಸೋಲಬೇಕು

ಇದಲ್ಲದೆ, ಗುಜರಾತ್- ಕೋಲ್ಕತ್ತಾ ನಡುವಿನ ಪಂದ್ಯದ ಫಲಿತಾಂಶ, ಡೆಲ್ಲಿ – ಲಕ್ನೋ ಪಂದ್ಯದ ಮ. ಫಫಲಿತಾಂಶ, ರಾಜಸ್ತಾನ-ಪಂಜಾಬ್ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಆರ್ ಸಿಬಿ ಪ್ಲೇ ಆಫ್ ತಲುಪುವ ಕನಸು‌ ನಿರ್ಧಾರವಾಗಲಿದೆ.

ಡೆಲ್ಲಿ ಮತ್ತು ಲಕ್ನೋ ನಡುವಿನ ಪಂದ್ಯವನ್ನು ಆರ್ ಸಿಬಿ ಅಭಿಮಾನಿಗಳು ಕಾತರದಿಂದ ಗಮನಿಸಬೇಕಾಗುತ್ತದೆ. ಯಾಕೆಂದರೆ ಯಾವ ತಂಡ ಗೆದ್ದರೂ 16 ಅಂಕ ಗಳಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಸೋತರೆ, ಆರ್ ಸಿಬಿಗೆ ಅವಕಾಶದ ಬಾಗಿಲು ತೆರೆಯುತ್ತದೆ. ಅದೂ ಕೂಡ ಉತ್ತಮ ರನ್ ರೇಟ್ ಇದ್ದರೆ ಮಾತ್ರ.

More articles

Latest article