ಕುಮಾರಸ್ವಾಮಿಗೆ ಮಲಗಿದ್ರು- ಎದ್ರೂ ನನ್ನ ಸರ್ವನಾಶವನ್ನೇ ಬಯಸುತ್ತಾರೆ: ಡಿ.ಕೆ. ಶಿವಕುಮಾರ್

ಕುಮಾರಸ್ವಾಮಿ ಸರ್ವನಾಶ ಮಾಡೋಕೆ ಬಯಸ್ತಿದ್ದಾರೆ. ಅವರು ಮಲಗಿದ್ರೂ ಎದ್ರೂ ಅದನ್ನೇ ಬಯಸುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿದ ಹಿನ್ನೆಲೆಯಲ್ಲಿ ಎಚ್‌ಡಿಕೆ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಚ್‌ಡಿಕೆ ಯಾವಾಗಲೂ ನನ್ನ ಸರ್ವನಾಶ ಮಾಡುವುದನ್ನೇ ಪ್ರತಿಯೊಂದು ದಿನ ಬಯಸುತ್ತಾರೆ. ನಾವು ಒಳ್ಳೆಯದು ಮಾಡಲು ಬಯಸಿದರೂ ಅವರ ಉದ್ದೇಶ ಬೇರೆ ಎಂದರು.

ನಮಗೆ ಅವರ ಬಗ್ಗೆ ಎಲ್ಲವೂ ಗೊತ್ತಿದೆ. ಅವರ ನಡೆ, ಆಚಾರ ವಿಚಾರ ಎಲ್ಲ‌ವೂ ಗೊತ್ತಿದೆ. ರಾಮನಗರ ಅಕ್ರಮ ಮಾಡೋಕೆ ಬಂದಿದ್ದಾರೆ. ರಾಮನಗರ ನಮ್ಮ‌ ಜಿಲ್ಲೆ. ಚನ್ನಪಟ್ಟಣ, ರಾಮನಗರ, ಕನಕಪುರ ಎಲ್ಲ ಒಂದೇ. ನಾವು ಬೆಂಗಳೂರಿಗರು. ದೇವೇಗೌಡರು ಬಂದಿದ್ದು ಬೆಂಗಳೂರು ಜಿಲ್ಲೆಗೆ. ರಾಮಕೃಷ್ಣ ಹೆಗಡೆ ಬಂದಿದ್ದೂ ಬೆಂಗಳೂರು ಜಿಲ್ಲೆಗೆ. ಕುಮಾರಸ್ವಾಮಿ ಬಂದಿದ್ದು ಬೆಂಗಳೂರು ಜಿಲ್ಲೆಗೆ. ನಮ್ಮ ಪೂರ್ವಜರು ಇಟ್ಟ ಹೆಸರು ಬೆಂಗಳೂರು. ನಾವು ಅದನ್ನು ಯಾಕೆ ಕಳೆದುಕೊಳ್ಳಬೇಕು. ಹೆಡ್ ಕ್ವಾಟರ್ಸ್ ರಾಮನಗರದಲ್ಲೇ ಇರುತ್ತೆ. ಅಭಿವೃದ್ಧಿ ದೃಷ್ಟಿಯಿಂದ ಮಾಡ್ತೇವೆ ಎಂದರು.

More articles

Latest article

Most read