ಬೆಂಗಳೂರು: ತಮಿಳುನಾಡು, ಆಂದ್ರ, ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬೇಸ್ ಇಲ್ಲ. ಕರ್ನಾಟಕದಲ್ಲಿ ಮಾತ್ರ ಹಿಂಬಾಗಿಲಿನಿಂದ ರಚಿಸಿದ ಸರ್ಕಾರ ಇತ್ತು. ಈಗ ಹೋಯಿತು. ಇಲ್ಲಿ ಅಧಿಕಾರ ಹಿಡಿಯಬೇಕು ಎನ್ನುವ ಉದ್ದೇಶದಿಂದ ಮೋದಿ ಹೋದಲ್ಲೆಲ್ಲಾ ಹತಾಷೆಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರಿಂದ ಇಲ್ಲಿ ಗೆಲುವು ಸಾಧ್ಯವಿಲ್ಲ. ಬಿಜೆಪಿ ಡಬಲ್ ಡಿಜಿಟ್ ದಾಟಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿದರು.
ನಗರದ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಅವರು ಎಲ್ಲೆಡೆ ಚರ್ಚೆಯಲ್ಲಿರುವ ಮೋದಿ ದ್ವೇಷ ಭಾಷಣದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಐಟಿ ರೇಡ್ ಬಗ್ಗೆ ಖಾರವಾಗಿ ಉತ್ತರಿಸಿದ ಅವರು, ಚುನಾವಣೆ ಹೊತ್ತಲ್ಲ ಮೋದಿ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಬೆಂಗಳೂರು: ರೇಡ್ ವಿಚಾರಕ್ಕೆ ಕೇಂದ್ರ ಸರ್ಕಾರದ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಚುನಾವಣೆಯ ಹೊತ್ತಲ್ಲಿ ದುರ್ಬಳಕೆಯಾಗುತ್ತಿದೆ ಎಂದಿದ್ದಾರೆ. ಐಟಿ ಬಳಸಿ ಕಾಂಗ್ರೆಸ್ ನವರ ಮೇಲೆ ದಾಳಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಪಾಲ್ಗೊಳ್ಳಬಾರದು ಎನ್ನುವುದು ಅವರ ಉದ್ದೇಶ.
ಮೋದಿಯ ಮಂಗಳಸೂತ್ರ ಹೇಳಿಕೆ ಬಗ್ಗೆ ಮಾತನಾಡಿದ ಅವರು ಪ್ರಿಯಾಂಕಾ ಗಾಂಧಿಯವರ ನೋವಿನ ನುಡಿಗಳನ್ನು ನೆನಪಿಸಿಕೊಂಡರು. ಅವರ ತಾಯಿ ದೇಶಕ್ಕಾಗಿ ತಮ್ಮ ಮಂಗಳ ಸೂತ್ರ ಕಳೆದುಕೊಂಡಿದ್ದಾರೆ ಎಂದರು.
ಹಣ ಹಂಚಿಕೆ ಬಗ್ಗೆ ಮಾತನಾಡಿದ ಅವರು, ಬಿಜೆಪಿಯವರು ಎಲ್ಲೂ ಹಣ ಹಂಚುತ್ತಿಲ್ಲವಾ. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲೇ ಮೂರು ಜನ ಕಾಂಗ್ರೆಸ್ ನವರ ಮೇಲೆ ದಾಳಿ ಆಗಿದೆ. ನಾಳೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ನಾವು ನುಡಿದಂತೆ ನಡೆದುಕೊಂಡಿದ್ದೇವೆ. ಬಿಜೆಪಿಯವರು ಎಲ್ಲರಿಗೂ ಚೊಂಬು ಕೊಟ್ಟಿದ್ದಾರೆ. ಎಲ್ಲ ಮತದಾರರು ಪ್ರಾಮಾಣಿಕತೆಗೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.
ಸ್ಯಾಮ್ ಪಿತ್ರೋಡ ಹೇಳಿಕೆ ವಿಚಾರ, ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಇದು ಭಾರತ. ಯಾವ ಟ್ಯಾಕ್ಸ್ ಇಲ್ಲಾ ಅಂತ ಜಯರಾಂ ರಮೇಶ್ ಹೇಳಿದ್ದಾರೆ. ನಮ್ಮ ಸಂಸ್ಕೃತಿ ಯಂತೆ ಪರಂಪರೆಯಂತೆ ಮುಂದುವರಿಯುತ್ತದೆ. ರಾಜಕೀಯದಲ್ಲೇ ಕುಟುಂಬದವರು ಮುಂದುವರಿಯುತ್ತಾರಂತೆ, ಇನ್ನು ಪಿತ್ರಾರ್ಜಿತ ಆಸ್ತಿ ಬಿಟ್ಟು ಕೊಡ್ತಾರಾ? ಯಾರದೋ ವೈಯುಕ್ತಿಕ ಹೇಳಿಕೆ ಪಕ್ಷದ ಹೇಳಿಕೆ ಅಲ್ಲ. ಪಕ್ಷದ ನಿಲುವು ಸ್ಪಷ್ಟ. ಡೆತ್ ಟ್ಯಾಕ್ಸ್ ಆ ರೀತಿಯ ಯಾವ ಪ್ರಸ್ತಾಪವೂ ಇಲ್ಲ ಎಂದಿದ್ದಾರೆ.