ವಿಧಾನ ಪರಿಷತ್ ಸದಸ್ಯರ ನಾಮಕರಣ ಚರ್ಚೆ: ಡಿಕೆ ಶಿವಕುಮಾರ್

Most read

ಬಾಗಲಕೋಟೆ: ವಿಧಾನ ಪರಿಷತ್ಗೆ ನಾಲ್ವರು ಸದಸ್ಯರ ನಾಮಕರಣ ಸೇರಿದಂತೆ ಪಕ್ಷದ ವಿವಿಧ ವಿಚಾರಗಳನ್ನು ಪಕ್ಷದ ವರಿಷ್ಠರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಜಿಲ್ಲೆಯ ಜಮಖಂಡಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ನಡೆಯಲಿರುವ ಕರ್ನಾಟಕ ಭವನ ಉದ್ಘಾಟನೆಯಲ್ಲೂ ಭಾಗವಹಿಸಲಿದ್ದೇನೆ. ಆ ನಂತರ ಕೇಂದ್ರ ಸಚಿವ ರಾಜನಾಥ ಸಿಂಗ್ ಸೇರಿದಂತೆ ಬೇರೆ, ಬೇರೆ ಸಚಿವರನ್ನೂ ಭೇಟಿ ಮಾಡಲಿದ್ದೇನೆ. ಸಂಪುಟ ಪುನರ್ ರಚನೆ ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಆ ವಿಷಯದಲ್ಲಿ ಅವರ ನಿರ್ಧಾರವೇ ಅಂತಿಮ ಎಂದು ಹೇಳಿದರು.

ಹಾಲಿನ ದರ ಏರಿಕೆ ಕುರಿತ ಪ್ರಶ್ನೆಗೆ, ರೈತರು ಬದುಕಬೇಕೋ, ಬೇಡವೋ. ರೈತರ ಹಿತದೃಷ್ಟಿಯಿಂದ ಬೆಲೆ ಏರಿಕೆ ಮಾಡಲಾಗಿದೆ. ಐದು ಗ್ಯಾರಂಟಿಗಳನ್ನು ನೀಡಲಾಗಿದೆ. ಬೆಲೆ ಏರಿಕೆಯಿಂದ ತೊಂದರೆಯಾಗಬಾರದು ಎಂದೇ ಐದು ಗ್ಯಾರಂಟಿಗಳನ್ನು ನೀಡಲಾಗಿದೆ ಎಂದರು.

More articles

Latest article