ಕಾಂಗ್ರೆಸ್ ನಿಂದ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ? ಡಿಕೆಶಿ ಸುಳಿವು

ಬೆಂಗಳೂರು: ಧಾರವಾಡ ಕ್ಷೇತ್ರದಿಂದ ದಿಂಗಾಲೇಶ್ವರ ಶ್ರೀಗಳಿಗೆ ಟಿಕೆಟ್ ನೀಡುವ ವಿಚಾರಕ್ಕೆ ಒತ್ತಾಯ ಹೆಚ್ಚಾಗಿದ್ದು, ಈ ಕುರಿತು ಹೈಕಮಾಂಡ್ ಜೊತೆ ಮಾತಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಏನೇ ಮಾಡುವುದಿದ್ದರೂ ಪರೋಕ್ಷವಾಗಿ ಅಲ್ಲ, ನೇರವಾಗಿ ಮಾಡುತ್ತೇವೆ ಎಂದು ಹೇಳಿದರು.

ಈಗಾಗಲೇ ಧಾರವಾಡ ಕ್ಷೇತ್ರಕ್ಕೆ ನಮ್ಮ ಅಭ್ಯರ್ಥಿಯನ್ನು ಘೋಷಿಸಿದ್ದೇವೆ. ಶ್ರೀಗಳ ಬಗ್ಗೆ ಗೌರವವಿದೆ. ನಮ್ಮ ಅಭ್ಯರ್ಥಿಯೂ ಸಮರ್ಥರಿದ್ದಾರೆ. ಆದ್ರೂ ಅಲ್ಲಿ ಒತ್ತಡ ಬರುತ್ತಿದೆ. ಇವತ್ತು ನಾಳೆ ನಾನು ಸಿಎಂ ಕುಳಿತು ಮಾತನಾಡುತ್ತೇವೆ. ಬಳಿಕ ಹೈಕಮಾಂಡ್ ಗಮನಕ್ಕೆ ತಂದು ನಿರ್ಧರಿಸುತ್ತೇವೆ ಎಂದಿದ್ದಾರೆ.

More articles

Latest article

Most read