ಡಿಜಿಟಲ್‌ ವಂಚನೆ; ದೆಹಲಿಯ ನಿವೃತ್ತ ಬ್ಯಾಂಕರ್‌ ಗೆ 23 ಕೋಟಿ ರೂ. ವಂಚನೆ

Most read

ನವದೆಹಲಿ: ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಸೈಬರ್ ವಂಚಕರು ದೆಹಲಿಯ ನಿವಾಸಿ ನಿವೃತ್ತ ಬ್ಯಾಂಕರ್‌ ಒಬ್ಬರಿಗೆ 23 ಕೋಟಿ ರೂ.ಗಳನ್ನು ವಂಚಿಸಿರುವ ಪ್ರಕರಣ ವರದಿಯಾಗಿದೆ.

ವಂಚಕರು ಮುಂಬೈ ಪೊಲೀಸರ ಹೆಸರಿನಲ್ಲಿ ದಕ್ಷಿಣ ದೆಹಲಿಯ ಗುಲ್ಮೋಹರ್ ಪಾರ್ಕ್ ಪ್ರದೇಶದಲ್ಲಿ ವಾಸಿಸುತ್ತಿರುವ ನಿವೃತ್ತ ಬ್ಯಾಂಕರ್ ನರೇಶ್‌ ಮಲ್ಹೋತ್ರಾ ಅವರನ್ನು ಆಗಸ್ಟ್‌ 4ರಿಂದ ಸೆ.4ರ ಒಂದು ತಿಂಗಳ ಅವಧಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬಂಧಿಸಿ ವಂಚನೆ ಎಸಗಿದ್ದಾರೆ.  

ಆಗಸ್ಟ್‌ ನಾಲ್ಕರಂದು ಮಹಿಳೆಯೊಬ್ಬರು ಇಡಿ ಅಧಿಕಾರಿ ಹೆಸರಿನಲ್ಲಿ ಬ್ಯಾಂಕರ್‌ ಗೆ ನಿಮ್ಮ ಆಧಾರ್ ಕಾರ್ಡ್, ಡ್ರಗಸ್‌ ಸಾಗಣೆ, ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ದಾಖಲೆಗಳು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಬಳಕೆಯಾಗಿದೆ ಎಂದು ಹೆದರಿಸಿ ಅವರನ್ನು ಮನೆಯಿಂದ ಹೊರಬರದಂತೆ ನಿರ್ಬಂಧಿಸಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಸುಮಾರು 23 ಕೋಟಿ ರೂ.ಗಳನ್ನು ಆರೋಪಿಗಳು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಈ ವಿಷಯವನ್ನು ಬಹಿರಂಗಪಡಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದೂ ಹೆದರಿಸಿದ್ದಾರೆ.

ಒಂದು ತಿಂಗಳ ನಂತರ ನರೇಶ್‌ ಮಲ್ಹೋತ್ರಾ ದೂರು ಸಲ್ಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ಇವರ ಖಾತೆಯಿಂದ ವರ್ಗಾವಣೆಯಾಗಿದ್ದ ಹಣದಲ್ಲಿ  2.3 ಕೋಟಿ ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಫ್ರೀಜ್ ಮಾಡಿಸಿದ್ದಾರೆ.

ಪ್ರಕರಣ ತನಿಖೆ ಮುಂದುವರೆದಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article