ಧರ್ಮಸ್ಥಳ ಪ್ರಕರಣ: ಬುರುಡೆ ಸಿಕ್ಕ ಸ್ಥಳದಲ್ಲಿ ಇಂದು 2ನೇ ಬಾರಿಗೆ ಮಹಜರು

Most read

ಮಂಗಳೂರು: ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷಿ ದೂರುದಾರ ಚಿನ್ನಯ್ಯ ತಂದೊಪ್ಪಿಸಿದ್ದ ಬುರುಡೆ ಇದ್ದ ಸ್ಥಳದಲ್ಲಿ ಇಂದು ಎರಡನೇ ಬಾರಿಗೆ ಮಹಜರು ನಡೆಸಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ ಐಟಿ ಅಧಿಕಾರಗಳ ತಂಡ ಬುರುಡೆಯನ್ನು ಚಿನ್ನಯ್ಯಗೆ ತಂದೊಪ್ಪಿಸಿದ್ದ ವಿಠಲ ಗೌಡ ಅವರನ್ನು ಬುರುಡೆ ಸಿಕ್ಕ ಸ್ಥಳಕ್ಕೆ ಕರೆದೊಯ್ದಿತ್ತು. ಈ ಬುರುಡೆ ನೇತ್ರಾವತಿ ಸ್ನಾನಘಟ್ಟದ ಅರಣ್ಯ ಪ್ರದೇಶದಲ್ಲಿ ಸಿಕ್ಕಿತ್ತು.

ಇಂದು ಬೆಳಗ್ಗೆ ಹಲವರ ಜತೆ ಪಾಂಗಾಳದ ವಿಠಲ ಗೌಡ ಅವರೂ ವಿಚಾರಣೆಗೆ ಹಾಜರಾಗಿದ್ದರು. ಅವರಿಂದ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಎಸ್‌ಐಟಿ ಅಧಿಕಾರಿ ಎಸ್.ಪಿ. ಸೈಮನ್ ನೇತೃತ್ವದ ತಂಡ ವಿಠಲ ಗೌಡ ಅವರನ್ನು ಬುರುಡೆ ಸಿಕ್ಕ ಜಾಗಕ್ಕೆ ಕರೆದೊಯ್ದಿದ್ದರು.

  ಈ ಹಿಂದೆ ಬುರುಡೆ ಪತ್ತೆಯಾಗಿದ್ದ ಸ್ಥಳವನ್ನು ವಿಠಲ ಗೌಡ ಅವರೇ ಸಾಕ್ಷಿದೂರುದಾರ ಚಿನ್ನಯ್ಯನಿಗೆ ತೋರಿಸಿದ್ದರು. ಅಲ್ಲಿಂದ ತಂದ  ಬುರುಡೆಯನ್ನು ಚಿನ್ನಯ್ಯ ಪೊಲೀಸರಿಗೆ ವಶಕ್ಕೆ ಒಪ್ಪಿಸಿದ್ದ. ಆ ಸ್ಥಳದಲ್ಲಿ ಸೆ.6ರಂದು ಸಂಜೆ ಮಹಜರು ನಡೆಸಲಾಗತ್ತು. ಅಂದು ಅಲ್ಲಿ ಭೂಮಿಯ ಮೇಲ್ಗಡೆಯೇ ಮೃತದೇಹ ಅವಶೇಷಗಳು ಪತ್ತೆಯಾಗಿದ್ದವು. ಅಂದುಸಂಜೆಯಾಗಿದ್ದರಂದ ಆ ಸ್ಥಳವನ್ನು ಕೂಲಂಕಷವಾಗಿ ಪರಿಶೀಲಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಹೆಚ್ಚಿನ ಸಾಕ್ಷ್ಯವನ್ನು ಸಂಗ್ರಹಿಸುವ ಸಲುವಾಗಿ ಇಂದು ಮತ್ತೊಮ್ಮೆ ವಿಠಲ ಗೌಡ ಅವರನ್ನು ಅಲ್ಲಿಗೆ ಕರೆದೊಯ್ಯಲಾಗಿತ್ತು ಎಂದು ಎಸ್‌ ಐಟಿ ಮೂಲಗಳು ತಿಳಿಸಿವೆ.

More articles

Latest article