ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳನ್ನು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ವ್ಯಾಪಕ ಶೋಧ ನಡೆಸಲು ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.
ಸಾಕ್ಷಿ ದೂರುದಾರ ಚಿನ್ನಯ್ಯ ಪೊಲೀಸರಿಗೆ ತಂದೊಪ್ಪಿಸಿದ್ದ ತಲೆಬುರುಡೆ ಇದೇ ಪ್ರದೆಶದಿಂದ ತರಲಾಗಿತ್ತು.ಈ ಸ್ಥಳವನ್ನು ಸೌಜನ್ಯ ಅವರ ಮಾವ ಧರ್ಮಸ್ಥಳ ಗ್ರಾಮದ ಪಾಂಗಾಳದ ವಿಠಲ ಗೌಡ ಅವರು ಚಿನ್ನಯ್ಯಗೆ ತೋರಿಸಿದ್ದರು. ನಂತರ ಎಸ್ ಐಟಿ ಈ ಸ್ಥಳದಲ್ಲಿ ಮಹಜರು ನಡೆಸಿತ್ತು.
ಈ ಪ್ರದೇಶದಲ್ಲಿ ಭೂಮಿಯ ಮೇಲ್ಬಾಗದಲ್ಲಿಯೇ ತಲೆ ಬುರುಡೆ ಮತ್ತು ಮೃತ ದೇಹಗಳಿಗೆ ಸಂಬಂಧಿಸಿದ ಅವಶೇಷಗಳು ಪತ್ತೆಯಾಗಿದ್ದವು. ಆದ್ದರಿಂದ ಈ ಭಾಗದಲ್ಲಿ ಮಯ್ಯಷ್ಟು ಉತ್ಖನನ ನಡೆಸಲು ಎಸ್ ಐಟಿ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಎಸ್ ಐಟಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಒಂದು ವೇಳೆ ಅರಣ್ಯ ಇಲಖೆ ಅನುಮತಿ ನೀಡಿದರೆ ಕೂಡಲೇ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಅಗೆಯಲು ಎಸೈಟಿ ನಿರ್ಧರಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರ ಗಮನಕ್ಕೂ ಈ ವಿಷಯ ತಂದಿದ್ದಾರೆ. ಮೀಸಲು ಅರಣ್ಯ ಪ್ರದೇಶದಲ್ಲಿ ಅಗೆಯಲು ಕಾನೂನು ಅಡ್ಡಿ ಬರಲಿದ್ದು, ಎಸ್ ಐಟಿ ಕಾನೂನು ತಜ್ಞರ ಮೊರೆ ಹೋಗಲು ನಿರ್ಧರಿಸಿದೆ.