ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹತ್ಯೆ ಮಾಡಲಾದ ನೂರಾರು ಶವಗಳನ್ನು ಹೂತುಹಾಕಿದ್ದೇನೆ ಎಂದು ಹೇಳಿ ಸಾಕ್ಷಿ ದೂರುದಾರನಾಗಿದ್ದ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಬೆಳ್ತಂಗಡಿಯಲ್ಲಿರುವ ಎಸ್.ಐ.ಟಿ ಕಚೇರಿಗೆ ಹಾಜರಾಗಿ ಮಹತ್ವದ ಮಾಹಿತಿಗಳನ್ನು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಜತೆಗೆ ಇಂದು ಚಿನ್ನಯ್ಯ ಸಹೋದರಿ ರತ್ನ ಆಗಮಿಸಿದ್ದು, ಆಕೆಯೂ ಮಾಹಿತಿ ನೀಡಿದ್ದಾಗಿ ತಿಳಿದು ಬಂದಿದೆ. ಇವರ ಹೇಳಿಕೆಗಳನ್ನು ಎಸ್ ಐಟಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ಚಿನ್ನಯ್ಯ ದೂರು ನೀಡುವುದಕ್ಕೂ ಮುನ್ನ ತನ್ನ ಪತ್ನಿಯ ಜತೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸಕ್ಕೆ ಭೇಟಿ ನೀಡಿ ಶವಗಳನ್ನು ಊತು ಹಾಕಿದ್ದರ ಬಗ್ಗೆ ಚರ್ಚೆ ನಡೆಸಿದ್ದರು. ಕಾಲಕ್ರಮೇಣ ಚಿನ್ನಯ್ಯ ತನ್ನ ಹೇಳಿಕೆಯನ್ನು ಬದಲಿಸುತ್ತಿದ್ದಂತೆ ಅತನ ಪತ್ನಿಯೂ ಸೌಜನ್ಯ ಹೋರಾಟಗಾರರ ವಿರುದ್ಧ ಆರೋಪ ಮಾಡತೊಡಗಿದ್ದಳು.
ಶನಿವಾರವಷ್ಟೇ ಸೌಜನ್ಯ ಕುಟುಂಬ ಮತ್ತು ಹೋರಾಟಗಾರರು ಎಸ್ ಐಟಿ ಕಛೇರಿಗೆ ಭೇಟಿ ನೀಡಿ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.