ಬೆಂಗಳೂರು: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡುವುದರ ಜತೆಗೆ ಇಲಾಖಾ ತನಿಖೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಆದೇಶಿಸಿದ್ದಾರೆ.
ಇಂದು ಈ ಪ್ರಕರಣ ಕುರಿತು ಪ್ರತಿಕರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್ ಕೆಂಡಾಮಂಡಲರಾಗಿದ್ದು ತಮ್ಮ ಇಲಾಖೆಯಲ್ಲಿ ಇಂತಹ ದುರ್ವರ್ತನೆಯನ್ನು ಸಹಿಸುವುದಿಲ್ಲ. ನಾವು ಖಡಕ್ ಆಗಿಯೇ ಇರಬೇಕಾಗುತ್ತದೆ. ನನ್ನನ್ನು ಭೇಟಿ ಮಾಡಲು ಬಂದರೂ ನಾನು ರಾಮಚಂದ್ರ ರಾವ್ ಗೆ ಅವಕಾಶ ನೀಡಲಿಲ್ಲ. ಹಿರಿಯ ಅಧಿಕಾರಿ ಎನ್ನುವುದನ್ನು ನೋಡದೇ ಕ್ರಮ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ಈ ಮಧ್ಯೆ ಇಂದು . ಬೆಳ್ಳಂಬೆಳಗ್ಗೆ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್ ಕುರಿತು ಗೃಹ ಸಚಿವರ ನಿವಾಸಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸಚಿವ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ.
ನಿನ್ನೆಯೇ ಈ ಪ್ರಕರಣ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತಾಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಮಚಂದ್ರ ರಾವ್ ಅವರ ವಿಚಾರಣೆ ನಡೆಸಿ ಅವರು ತಪ್ಪು ಎಸಗಿರುವುದು ಸಾಬೀತಾದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.
ತಮ್ಮ ಮೇಲಿನ ಆರೋಪಗಳನ್ನು ರಾಮಚಂದ್ರ ರಾವ್ ನಿರಾಕರಿಸಿದ್ದು, ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು ಷಡ್ಯಂತ್ರ ರೂಪಿಸಲಾಗಿದೆ. ಎಐ ತಂತ್ರಜ್ಞಾನ ಬಳಸಿ ಮಾಡಿದ ವಿಡಿಯೊ ಅಥವಾ ಎಡಿಟ್ ಮಾಡಿರುವ ವಿಡಿಯೊ ಬಳಸಿಕೊಳ್ಳಲಾಗಿದೆ ಎಂದು ಆಪಾದಿಸಿದ್ದಾರೆ.

