ಡಿನೋಟಿಫಿಕೇಷನ್ ವಿಚಾರಣೆ; ಎಚ್ ಡಿಕೆ ಗೈರಿಗೆ ಕೋರ್ಟ್ ಗರಂ

ಬೆಂಗಳೂರು: ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಇಂದೂ ಸಹ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಕುಮಾರಸ್ವಾಮಿ ಅವರ ವರ್ತನೆಗೆ ಕೋರ್ಟ್ ಅಸಮಾಧಾನಗೊಂಡಿದೆ. ಕುಮಾರಸ್ವಾಮಿ ಹಾಜರಿಗೆ ಇಂದೂ ಸಹ ಅವರ ವಕೀಲರು ವಿನಾಯಿತಿ ಕೋರಿ ಮನವಿ ಸಲ್ಲಿಸಿದ್ದಾರೆ.

ಎಷ್ಟು ಬಾರಿ ನಿಮಗೆ ಅವಕಾಶ ಕೊಡುವುದು? ಪದೇ ಪದೇ ನೀವು ಸಮಯ ಕೇಳುತ್ತಿದ್ದೀರಿ ? ಮುಂದಿನ ವಿಚಾರಣೆ ವೇಳೆ ಬರುತ್ತಾರೆ ಎಂದು ಹೇಳುತ್ತೀರಿ. ಮತ್ತೆ ಬಂದು ವಿನಾಯಿತಿ ಅರ್ಜಿ ಸಲ್ಲಿಸುತ್ತೀರಿ. ಎಂದು ಕುಮಾರಸ್ವಾಮಿ ಗೈರು ಹಾಜರಿಗೆ ಕೋರ್ಟ್ ಗರಂ ಅಭಿಪ್ರಾಯ ವ್ಯಕ್ತಪಡಿಸಿತು. ಡಿನೋಟಿಫಿಕೇಷನ್ ಪ್ರಕರಣದಲ್ಲಿ ಚಾಮರಾಜನಗರದ ಮಹಾದೇವಸ್ವಾಮಿ ದೂರು ನೀಡಿದ್ದರು.

More articles

Latest article

Most read