ಅಂಬೇಡ್ಕರ್‌ರನ್ನು ಅವಮಾನಿಸಿದ ಗೃಹ ಸಚಿವ ಅಮಿತ್‌ ಶಾ ಶಾ ರಾಜೀನಾಮೆಗೆ ಆಗ್ರಹಿಸಿ ಜ. 9 ರಂದು ಹು.ಧಾ.ಬಂದ್

Most read

ಹುಬ್ಬಳ್ಳಿ : ಬಾಬಾ ಸಾಹೇಬ್ ಅಂಬೇಡ್ಕರ್‌ ಅವರನ್ನು ನಿಂದಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ನೂರಕ್ಕೂ ಹೆಚ್ಚು ಸಂಘಟನೆಗಳು ಜನವರಿ 9 ರಂದು ಗುರುವಾರ ಹುಬ್ಬಳ್ಳಿ – ಧಾರವಾಡ ಮಹಾನಗರ ಬಂದ್‌ಗೆ ಕರೆ ನೀಡಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಬಿ.ಆರ್.ಅಂಬೇಡ್ಕರರವರ ಸ್ವಾಭಿಮಾನಿ ಅಭಿಮಾನಿ ಅನುಯಾಯಿಗಳ ಬಳಗದ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರನ್ನು ಕುರಿತು ಅಪಮಾನಕಾರಿ ಹೇಳಿಕೆ ನೀಡಿರುವ ಅಮಿತ್ ಶಾ ಹೇಳಿಕೆ ಖಂಡಿಸಿ ದಿ. 9 ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಆಚರಣೆಗೆ ನಿರ್ಧರಿಸಲಾಗಿದೆ. ಈ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಅವಳಿ ನಗರದ ಸುಮಾರು 102ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಬಂದ್‌ ಗೆ ಬೆಂಬಲಸಿವೆ ಎಂದರು.

ಈ ಬಂದ್‌ ಪಕ್ಷಾತೀತವಾಗಿದ್ದು, ಯಾವುದೆ ಪಕ್ಷ ಅಥವಾ ಸಂಘಟನೆ ಪರವಾಗಿಲ್ಲ. ದಿ. 9 ರಂದು ವಿವಿಧ ಬಡಾವಣೆಗಳಿಂದ ಮೆರವಣಿಗೆ ಮೂಲಕ ಆಗಮಿಸಿ ಹುಬ್ಬಳ್ಳಿಯಲ್ಲಿ ಚನ್ನಮ್ಮ ವೃತ್ತ ಮತ್ತು  ಧಾರವಾಡ ದ ಜುಬಿಲಿ ವ್ರತ್ತದಲ್ಲಿ ಸಮಾವೇಶಗೊಳ್ಳಲು ನಿರ್ಧರಿಸಲಾಗಿದೆ. ಸಂವಿಧಾನ ಮತ್ತು ಸಂವಿಧಾನಶಿಲ್ಪಿಯನ್ನು ಗೌರವಿಸುವ ಎಲ್ಲ ಮೀಸಲು ವರ್ಗದ ಎಲ್ಲ ಸಮುದಾಯದ ಪ್ರಮುಖರು  ಭಾಗವಹಿಸಲಿದ್ದಾರೆ. ಅವಳಿ ನಗರದಲ್ಲಿ ಸಾರ್ವಜನಿಕರು ಅಂದು ಯಾವುದೆ ಕೆಲಸ ಕಾರ್ಯ ಗಳನ್ನು ಹಮ್ಮಿಕೊಳ್ಳಬಾರದು. ವಾಹನ ಸಂಚಾರ, ವಾಣಿಜ್ಯ ವ್ಯವಹಾರ, ಹೋಟೆಲ್, ಸಿನಿಮಾ ಆಟೋ ,ಶಾಲಾ ಕಾಲೇಜು ,ಸರ್ಕಾರಿ ಕಛೇರಿಗಳನ್ನು ಬಂದ್ ಮಾಡಲು  ಮುಖಂಡರು ವಿನಂತಿಸಿದರು.

ಗೋಷ್ಠಿಯಲ್ಲಿ ಮಾತನಾಡಿದ ಅಭಿಮಾನಿ ಬಳಗದ ಪ್ರಮುಖರಾದ ಗುರುನಾಥ ಉಳ್ಳಿಕಾಶಿ, ಮಾರುತಿ ದೊಡ್ಡಮನಿ, ಎಮ್. ಅರವಿಂದ್, ಶ್ಯಾಮ ಜಾಧವ, ಶಂಕರ ಅಜಮನಿ,ದೊರೆರಾಜ ಮನಿಕುಂಟ್ಲ,ಸುರೇಶ ಕನ್ನಮಕ್ಕಲ್ಲ,ಸುವರ್ಣ ಕಲಕುಂಟ್ಲ,ನಾಗೇಶ ಕತ್ರಿಮಲ್ಲ,ಪ್ರಭು ಪ್ರಭಾಕರ,ಶ್ರೀನಿವಾಸ ಬೆಳದಡಿ, ಮಲ್ಲಿಕಾರ್ಜುನ ಬಿಳಾರ, ಪ್ರೇಮನಾಥ ಚಿಕ್ಕತುಂಬಳ, ರವಿ ಕದಂ, ಸಂಜು ಧುಮಕನಾಳ, ದೇವಣ್ಣ ಇಟಗಿ ಅವರು ಬಂದ್ ನ  ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.

More articles

Latest article