ಹೆದ್ದಾರಿಯಲ್ಲೇ ಲೈಂಗಿಕ ಕ್ರಿಯೆ ನಡೆಸಿದ ಬಿಜೆಪಿ ಮುಖಂಡ; ಎಫ್‌ ಐ ಆರ್ ದಾಖಲು

Most read

ನವದೆಹಲಿ: ಮಧ್ಯಪ್ರದೇಶದ ಬಿಜೆಪಿ ಮುಖಂಡನೊಬ್ಬ ಮಹಿಳೆಯೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲೇ ನಿಂತು ಲೈಂಗಿಕ ಕ್ರಿಯೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಂತರ ಪೊಲೀಸರು ಎಫ್‌ ಐ ಆರ್ ದಾಖಲಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಕಾಮಕೇಳಿಯಲ್ಲಿ ತೊಡಗಿಸಿಕೊಂಡವನನ್ನು ಬಿಜೆಪಿ ಮುಖಂಡ ಮನೋಹರ್‌ಲಾಲ್ ಧಾಕಡ್‌ ಎಂದು ಗುರುತಿಸಲಾಗಿದೆ. ಈತ ಮಧ್ಯಪ್ರದೇಶದ ಮಂದ್ಸೌ‌ರ್‌ ನ ಬಿಜೆಪಿ ನಾಯಕನಾಗಿದ್ದು, ಬಿಜೆಪಿಯ ರಾಷ್ಟ್ರೀಯ ಯುವಮೋರ್ಚಾ ಘಟಕದಲ್ಲೂ ಜವಾಬ್ದಾರಿ ನಿರ್ವಹಿಸಿದ್ದ ಎನ್ನಲಾಗಿದೆ.

ದೆಹಲಿ-ಮುಂಬೈ ಎಕ್ಸ್‌ ಪ್ರೆಸ್‌ವೇಯಲ್ಲಿ ಕಾರನ್ನು ನಿಲ್ಲಿಸಿದ ಈತ ಕಾರಿನಿಂದ ಇಳಿಯುವ ನಗ್ನ ಮಹಿಳೆಯೊಂದಿಗೆ ರಸ್ತೆಯಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ಘಟನೆ ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾದ ಕಾರಿನ ನಂಬರ್ ಪ್ಲೇಟ್ ಅನ್ನು ಆಧರಿಸಿ ಪರಿಶೀಲನೆ ನಡೆಸಿದಾಗ ಕಾರು ಮನೋಹರ್ ಲಾಲ್ ಧಾಕಡ್ ಗೆ ಸೇರಿದೆ ಎನ್ನುವುದು ತಿಳಿದು ಬಂದಿದೆ. ಭಾನ್ಪುರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 296, 285, 3 (5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರಾದರೂ, ಮನೋಹರ್‌ಲಾಲ್ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ವಿವಾಹಿತರಾಗಿರುವ ಮನೋಹರ್‌ಲಾಲ್ ಧಾಕಡ್‌ ಅವರ ಪತ್ನಿ ಜಿಲ್ಲಾ ಪಂಚಾಯತ್ ಸದಸ್ಯೆ ಎಂದು ತಿಳಿದುಬಂದಿದೆ.

More articles

Latest article